ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಇಸ್ರೇಲ್ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಇಂದು ಮುಂಜಾನೆ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ವದೇಶಕ್ಕೆ ಕರೆತರಲು ಎರಡನೇ ಚಾರ್ಟರ್ ವಿಮಾನವು ಶನಿವಾರ ಬೆಳಿಗ್ಗೆ ಟೆಲ್ ಅವಿವ್‌ನಿಂದ 'ಆಪರೇಷನ್ ಅಜಯ್' ಅಡಿಯಲ್ಲಿ ನವದೆಹಲಿಗೆ ಬಂದಿಳಿದಿದೆ.
ನಿನ್ನೆ ಆಪರೇಷನ್ ಅಜಯ್ ಕಾರ್ಯಾಚರಣೆಯಡಿ 212 ಭಾರತೀಯ ಪ್ರಜೆಗಳನ್ನು ಸಂಘರ್ಷ ಪೀಡಿತ ದೇಶದಿಂದ ಸ್ವದೇಶಕ್ಕೆ ಮರಳಿ ಕರೆತರಲಾಗಿದ್ದು, ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್(ಹಿಂದಿನ ಟ್ವಿಟ್ಟರ್)ನಲ್ಲಿ 235 ಭಾರತೀಯರನ್ನು ಹೊತ್ತ ವಿಮಾನ ಇಸ್ರೇಲ್ ನ ಟೆಲ್ಅವೀವ್ ನಿಂದ ಟೇಕ್ ಆಫ್ ಆಗುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ಹಂಚಿಕೊಂಡಿದ್ದರು.
ವಿಶೇಷ ಚಾರ್ಟರ್ಡ್ ವಿಮಾನಗಳು ಭಾರತೀಯರನ್ನು ಮರಳಿ ಕರೆತರುತ್ತಿದ್ದು, ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗ ಏರ್ ಇಂಡಿಯಾ ಮತ್ತು ಇತರ ಏರ್ಲೈನ್ಸ್ ತನ್ನ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಇಸ್ರೇಲ್‌ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತು. ರದಿಗಳ ಪ್ರಕಾರ, ಅಗತ್ಯವಿದ್ದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳನ್ನು ಸಹ ಭಾರತೀಯರನ್ನು ಕರೆತರಲು ನಿಯೋಜಿಸಲಾಗುತ್ತದೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ನಲ್ಲಿನ ಪರಿಸ್ಥಿತಿಯ ಕ್ಷಣ ಕ್ಷಣದ ಮಾಹಿತಿಗಾಗಿ ರಾಜಧಾನಿಯಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ನಿಯಂತ್ರಣ ಕೊಠಡಿಯ ಫೋನ್ ಸಂಖ್ಯೆಗಳು: 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988 ಆಗಿದೆ.