ಭೋಪಾಲ್: ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಜಗತ್ತು ಹಲವು ಸಾಧನೆಗಳ ಮೆಟ್ಟಿಲು ಹತ್ತುತ್ತಿದೆ. ಇದರೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವೊಂದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅದರಂತೆ ಮಧ್ಯಪ್ರದೇಶದಲ್ಲಿ ಡ್ರೋನ್ ತಂತ್ರಜ್ಞಾನದಲ್ಲಿ ಯುವಜನರಿಗೆ ತರಬೇತಿ ನೀಡುವುದಕ್ಕಾಗಿ ಐದು ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹೇಳಿದ್ದಾರೆ.
ಗ್ವಾಲಿಯರ್, ಭೋಪಾಲ್, ಇಂಡೋರ್, ಜಬಲ್ಪುರ್ ಮತ್ತು ಸತ್ನಾ ಜಿಲ್ಲೆಗಳಲ್ಲಿ ಈ ಹೊಸ ಶಾಲೆಗಳು ತೆರೆಯಲಿದ್ದು, ಯುವಪೀಳಿಗೆಗೆ ನವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲಿವೆ ಎಂದ ಸಿಂಧಿಯ, ಡ್ರೋನ್ ಟೆಕ್ನಾಲಜಿಯು ಕ್ರಾಂತಿಕಾರಿ ಅನ್ವೇಷಣೆಯಾಗಿದ್ದು, ಬಡತನವನ್ನು ಸಮೃದ್ಧಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್)