ನ್ಯೂಸ್

ಸೋರುತ್ತಿದ್ದ ಎಸಿ ಕೋಚ್‌: ರೈಲಿನಲ್ಲಿ ಓಪನ್ ಶವರ್ ಸೌಲಭ್ಯ ಎಂದು ನೆಟ್ಟಿಗರ ವ್ಯಂಗ್ಯ

ದೆಹಲಿ: ರೈಲ್ವೆ ಎಸಿ ಕೋಚ್‌ನ ಛಾವಣಿಯ ಮೂಲಕ ನೀರು ಸೋರಿಕೆಯಾಗಿ ಪ್ರಯಾಣಿಕರು ತೊಂದರೆಗೆ ಒಳಗಾದ ಘಟನೆ ಆವಂತಿಕಾ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ದಶಪಥ: ಅಪಘಾತದಲ್ಲಿ ಈ ತಿಂಗಳು 45 ಸಾವು!; ಸಚಿವರಿಂದ ಅಧಿಕಾರಿಗಳ ಸಭೆ, ಸದ್ಯದಲ್ಲೇ ತನಿಖೆ?

ಮುಂಬೈ-ಇಂದೋರ್ ಆವಂತಿಕಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರುತ್ತಿರುವ ಹಾಗೂ ಪ್ರಯಾಣಿಕನ ಅಲ್ಲಿಯೇ ಕುಳಿತಿರುವ ಸ್ಥಿತಿಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೂಡಲೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಈ ಕುರಿತು ತೀವ್ರ ಆಕ್ಷೇಪದ ಜತೆಗೆ ತರಹೇವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಕಾಂಗ್ರೆಸ್ ಕೂಡ್​​ ಈ ವೀಡಿಯೊವನ್ನು ಮರು-ಶೇರ್ ಮಾಡಿದ್ದು, ಪ್ರಚಾರದ ಬದಲಾಗಿ ರೈಲ್ವೆಯ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಬಹುದಿತ್ತು. ಹೊಸ ರೈಲುಗಳಿಗೆ ಹಸಿರು ಧ್ವಜವನ್ನು ತೋರಿಸುವ ರೈಲ್ವೆ ಮಂತ್ರಿ ಪ್ರಸ್ತುತ ವಿದೇಶದಲ್ಲಿದ್ದು, ಹೆಸರಿಗೆ ಮಾತ್ರ ರೈಲ್ವೆ ಮಂತ್ರಿ ಎನಿಸಿಕೊಂಡಿರುವ ವ್ಯಕ್ತಿ ಸ್ವಲ್ಪ ಇತ್ತ ಗಮನಹರಿಸಬೇಕು ಎಂದು ವ್ಯಂಗ್ಯವಾಡಿ ಟ್ವೀಟ್​​ ಮಾಡಿದೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ 27 ವರ್ಷಗಳ ಬಳಿಕ ಬಂಧನ: ಈಕೆಗಾಗಿ ಮೂರು ರಾಜ್ಯದಲ್ಲಿ ಹುಡುಕಾಡಿದ್ದ ಪೊಲೀಸ್​​

ಈ ವಿಡಿಯೋಗೆ ಭಾರತೀಯ ರೈಲ್ವೆಯು ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೌಲಭ್ಯ ಪ್ರಾರಂಭಿಸಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಭಾರತೀಯ ರೈಲ್ವೆ ಈಗ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್​ರೂಮ್​​ನ್ನು ಒದಗಿಸಲು ಚರ್ಚಿಸುತ್ತಿದೆ ಎಂದು ವ್ಯಂಗ್ಯಭರಿತವಾಗಿ ಕಾಮೆಂಟ್​​ನಲ್ಲಿ ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತ ಪಶ್ಚಿಮ ಪಶ್ಚಿಮ ರೈಲ್ವೇಸ್ ಈ ಸಮಸ್ಯೆಯನ್ನು ಗಮನಿಸಿದ್ದು ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಯಾಣಿಕರ ಅನುಕೂಲವು ನಮ್ಮ ಮೊದಲ ಆದ್ಯತೆಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದೆ.(ಏಜೆನ್ಸೀಸ್​)