ನ್ಯೂಸ್

ಜೆಡಿಎಸ್ ಗೆ ರಾಜ್ಯ ಪಕ್ಷದ ಸ್ಥಾನಮಾನ; ಅಧಿಸೂಚನೆ ಪ್ರಕಟ

Bengaluru - Political - Vilas Melagiri

ಬೆಂಗಳೂರು: ಜೆಡಿಎಸ್ ರಾಜ್ಯ ಪಕ್ಷದ ಸ್ಥಾನ ಮಾನ ಹೊಂದಿದೆ ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಗೆಜೆಟ್ ನಲ್ಲಿ ಪ್ರಕಟಿಸಿದೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ಕನ್ನಡ ಚಳವಳಿ ವಾಟಾಳ್ ಸೇರಿದಂತೆ 110 ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳು ರಾಜ್ಯದಲ್ಲಿವೆ.

  1. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳು ಮಾತ್ರ ರಾಷ್ಟ್ರೀಯ ಸ್ಥಾನಮಾನ ಹೊಂದಿವೆ. 191 ಮುಕ್ತ ಚಿಹ್ನೆಗಳು ಇರುವಿದಾಗಿ ಆಯೋಗ ಹೇಳಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನಿಯಮದಡಿ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ.