ನ್ಯೂಸ್

'ನೀವು ಬುಕ್​ ಮಾಡಿದ ಬಟ್ಟೆ ಸ್ಟಾಕ್​ ಇಲ್ಲ, ಓಟಿಪಿ ಹೇಳಿ ಅಕೌಂಟ್ ನೋಡ್ಕೊಳ್ಳಿ..'ಎಂದು ಯುವತಿಯ ವಂಚಿಸಿದ್ರು!

Mandara

ಬೆಂಗಳೂರು: ಆನ್​ಲೈನ್​ನಲ್ಲಿ ಬಟ್ಟೆ ಖರೀದಿಸಿದ್ದ ಯುವತಿಗೆ ಹಣ ವಾಪಸ್ ನೀಡುವ ಸೋಗಿನಲ್ಲಿ ದೂರವಾಣಿ ಕರೆ ಮಾಡಿ 44 ಸಾವಿರ ರೂಪಾಯಿಯನ್ನು ಸೈಬರ್ ಕಳ್ಳರು ದೋಚಿದ್ದಾರೆ.

ಹೆಣ್ಣೂರಿನ 28 ವರ್ಷದ ಯುವತಿ ವಂಚನೆಗೆ ಒಳಗಾದವರು. ಆ.2ರಂದು ಆನ್​ಲೈನ್ ಶಾಪಿಂಗ್ ನಲ್ಲಿ ಯುವತಿ, ಹಣ ಪಾವತಿ ಮಾಡಿ ಲೆಹೆಂಗಾ ಖರೀದಿಸಿದ್ದರು. ಅದಾದ ಮಾರನೇ ದಿನ ಕರೆ ಮಾಡಿದ ವ್ಯಕ್ತಿಯೊಬ್ಬ, ‘ನೀವು ಬುಕ್ ಮಾಡಿದ ಬಟ್ಟೆ ಸದ್ಯಕ್ಕೆ ಇಲ್ಲದಿರುವುದರಿಂದ ನಿಮ್ಮ ಹಣ ವಾಪಸ್ ನೀಡುತ್ತೇವೆ. ನಿಮ್ಮ ಮೊಬೈಲ್​ಗೆ ಬರುವ ಒಟಿಪಿ ಹೇಳಿ’ ಎಂದು ತಿಳಿಸಿದ್ದ.

ಒಟಿಪಿ ಹೇಳುತ್ತಿದಂತೆ ಯುವತಿ ಬ್ಯಾಂಕ್ ಖಾತೆಯಿಂದ 44 ಸಾವಿರ ರೂ. ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡು ಕರೆ ಕಟ್ ಮಾಡಿದ್ದಾರೆ. ಪ್ರಶ್ನೆ ಮಾಡಲು ವಾಪಸ್ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಪೂರ್ವ ವಿಭಾಗ ಸಿಇಎನ್ ಪೊಲೀಸರು ತಿಳಿಸಿದ್ದಾರೆ.