ದೆಹಲಿ: ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ಪ್ಲಸ್ ತನ್ನ ನೂತನ ಪೋನ್ನ್ನು ಮಾರುಕಟ್ಟೆಗೆ ತಂದಿದ್ದ, ಫೋನ್ನ ಫೀಚರ್ಸ್ ನೋಡಿ ಟೆಕ್ ಪ್ರಿಯರು ಹುಬ್ಬೆರುಸುತ್ತಿದ್ದಾರೆ. ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ ಒನ್ಪ್ಲಸ್ ಏಸ್ ಪ್ರೋನ ಉತ್ತರಾಧಿಕಾರಿಯಾಗಿ ಒನ್ಪ್ಲಸ್ ಏಸ್-2 ಪ್ರೋವನ್ನು ಬಿಡುಗಡೆಗೊಳಿಸಿದೆ.
ಒನ್ಪ್ಲಸ್ ಹೊಸ ಏಸ್-2 ಪ್ರೋ ಸ್ಮಾರ್ಟ್ಫೋನ್ನ್ನು ಚೀನಾದಲ್ಲಿ ಆಗಸ್ಟ್ 16ರಂದು ಬಿಡುಗಡೆ ಮಾಡಿದ್ದು, ಹಲವಾರು ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬುದನ್ನು ಇನ್ನು ಬಹಿರಂಗಪಡಿಸಿಲ್ಲವಾದರೂ, ಶೀಘ್ರದಲ್ಲೇ ಭಾರತೀಯರ ಕೈಗೆ ಸಿಗಲಿದೆ ಎನ್ನಲಾಗಿದೆ. ಒನ್ಪ್ಲಸ್ ಹೊಸ ಏಸ್-2 ಪ್ರೋ ಎರಡು ಮಾದರಿಗಳಲ್ಲಿ ಲಭ್ಯವಿದ್ದು, 24GB RAM + 1TB ಆನ್‌ಬೋರ್ಡ್ ಸ್ಟೋರೇಜ್‌ನ ಟಾಪ್-ಎಂಡ್ ಮಾಡೆಲ್ ಬೆಲೆ ಅಂದಾಜು ರೂ 45,900 ಇರಲಿದೆ. ಮತ್ತು 12GB RAM + 256GB ಸಂಗ್ರಹಣೆಯ ಮಾಡೆಲ್ ಬೆಲೆಅಂದಾಜು ರೂ 34,400 ಇರಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಂಗಡಿಗೆ ಹೋಗಿ ಬರುತ್ತೇನೆಂದವ ವಾಪಸ್ಸು ಬರಲೇ ಇಲ್ಲ: ಪಾಲಕರು ಕಂಗಾಲು
ಒನ್ಪ್ಲಸ್ ಹೊಸ ಏಸ್-2 ಪ್ರೋ 6.74-ಇಂಚಿನ FHD+ 1.5K ಅಮೋಲ್ಡ ಕರ್ವ್ ಡಿಸ್‌ಪ್ಲೇ ಜೊತೆಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8 Gen 2 ಪ್ರೊಸೆಸರ್ನಿಂದ ಚಾಲಿತವಾಗಿದೆ. ಇದು 50MP ಸೋನಿ IMX890 OIS ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕದೊಂದಿಗೆ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್ನ್ನು ಹೊಂದಿದೆ.ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.
ಜತೆಗೆ ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು, 150W SUPERVOOC ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಫೋನ್ ಕೇವಲ 17 ನಿಮಿಷಗಳಲ್ಲಿ 100% ತಲುಪುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಆ್ಯಂಡ್ರಾಯ್ಡ್ 13 ಆಧಾರಿತ ಆಪರೇಟಿಂಗ್ ಸಿಸ್ಟಮ್ನ್ನು ಹೊಂದಿದ್ದು, ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿದೆ ಎನ್ನಲಾಗಿದೆ. ಜತೆಗೆ USB ಟೈಪ್-C ಪೋರ್ಟ್ ಹೊಂದಿರುವ ಈ ಫೋನ್, ಹೊಸ 'ರೇನ್ ಟಚ್' ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಮಳೆಯ ಸಮಯದಲ್ಲಿಯೂ ಫೋನ್ ಆಪರೇಟಿಂಗ್ ಮಾಡಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದಾಗಿದೆ.(ಏಜೆನ್ಸೀಸ್)