ಕೋಲಾರ: ಅಖಂಡ ಭಾರತ ವಿನಾಯಕ ಸಮಿತಿಯಿಂದ 11ನೇ ವಾರ್ಷಿಕ ಗಣೇಶೋತ್ಸವವನ್ನು ಸೆ.7ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಪ್ರವಾಸಿ ಮಂದಿರದ ಸಮೀಪ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು, ಹಬ್ಬದ ದಿನದಿಂದ ವಿಸರ್ಜನೆ ದಿನದವರೆಗೂ ದಿನಕ್ಕೊಂದು ಸಾಂಸತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಮಿತಿಯನ್ನು ನೀರಾವರಿ ಹೋರಾಟದ ಹಿನ್ನಲೆಯಲ್ಲಿ ಪ್ರಾರಂಭಿಸಿ ಗಣೇಶೋತ್ಸವ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಕಿರುಧಾರವಾಹಿ ಕಾರ್ಯಕ್ರಮಗಳನ್ನು ನೀಡುವಂತ ಕಲಾವಿದರನ್ನು ಆಹ್ವಾನಿಸಿಲಾಗಿದೆ. ಜೀ ಟಿವಿಯ ಮಜಾಭಾರತ್, ಮಿಮಿಕ್ರಿ ತಂಡ ಸೇರಿ ನವರಸಗಳನ್ನು ಒಳಗೊಂಡ ಕಾರ್ಯಕ್ರಮ ಆಯೋಜಿಸಲಾಗಿದೆ. ಬಂಗಾರಪೇಟೆಯ ಪಲ್ಲವಿಮಣಿ ಅವರು ನಮ್ಮೊಂದಿಗೆ ಕೈ ಜೋಡಿಸಿರುವುದು ಮತ್ತಷ್ಟು ಚೈತನ್ಯ ತುಂಬಿದಂತಾಗಿದೆ ಎಂದು ಹೇಳಿದರು.
ಸೆ.15ರಂದು ಗಣೇಶ ವಿಸರ್ಜನೆ ನಡೆಯಲಿದ್ದು ನಗರದ ಎಂಜಿ ರಸ್ತೆ, ಹೊಸ ಬಸ್ನಿಲ್ದಾಣ, ದೊಡ್ಡಪೇಟೆ, ಬ್ರಾಹ್ಮಣರ ಬೀದಿ ಮಾರ್ಗದಲ್ಲಿ ಸಾಗಿ ಕೋಲಾರಮ್ಮ ಕೆರೆಯ ಕಲ್ಯಾಣ ಬಳಿ ವಿಸರ್ಜನೆ ಮಾಡುವ ಮೂಲಕ ಸಂಪನ್ನಗೊಳ್ಳಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಮೆರಗು ನೀಡಲಿವೆ, ಪ್ರತಿ ವರ್ಷದಂತೆ ಈ ಬಾರಿಯು ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಮಹಾಪೋಷಕ ಪಲ್ಲವಿ ಮಣಿ ಮಾತನಾಡಿ, ಕಾರ್ಯಕ್ರಮದಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ವಿದ್ವಾಂಸಕ ಕುದ್ರೂಳಿ ಗಣೇಶ್ ನೇತೃತ್ವದಲ್ಲಿ 20 ಮಂದಿಯ ತಂಡ, ಜೀ ಟಿ.ವಿ.ಯ ಮಿಮಿಕ್ರಿ ಗೋಪಿ, ಕನ್ನಡದ ಕೋಗಿಲೆ, ಬೆಂಗಳೂರಿನ ಕರ್ನಾಟಕ ಡ್ಯಾನ್ಸ್ ತಂಡ, ಕಿರಿತೆರೆಯ ಕಮಲಿ ವಾಣಿಗೌಡ, ಉದಯ ಟಿವಿ. ರಮೇಶ್, ಚೆನ್ನೆ$ ಕಲಾವಿಧರಾದ ಟ್ವಿನ್ ಬ್ರದರ್ಸ್ ಕಿಚ್ಚ ಸುದೀಪ್ ಸೇರಿ ಹಲವು ಕಲಾವಿದರು ಸಾಂಸತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ನಾಮಾಲ ಮಂಜುನಾಥ್, ಸಾ.ಮ.ಅನಿಲ್ಬಾಬು, ಬಾಲು, ಚಂದ್ರ ಶೇಖರ್, ಶಶಿಧರ್, ಸಂತೋಷ್, ಮುರಳಿ, ವಿನಾಯಕ ಇದ್ದರು.