ರಮೇಶ ಜಿಗಜಿಣಗಿ 
ನ್ಯೂಸ್

10 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಅನುದಾನ

ಇಂಡಿ: ವಿಜಯಪುರ ಮತಕ್ಷೇತ್ರಕ್ಕೆ ಕಳೆದ 10 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ವಿವಿಧ ರೀತಿಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಂಡಿ ವಿಧಾನಸಭಾ ಮತಕ್ಷೇತ್ರದ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ಕಲಕೋಟ- ವಿಜಯಪುರ 100 ಕಿಮೀ. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯ, ರೈಲ್ವೆ ಬ್ರಾಡ್‌ಗೇಜ್ ಅಗಲೀಕರಣ, ರೈಲ್ವೆ ಸ್ಟೇಷನ್ ನವೀಕರಣ, ರೈಲು ಮಾರ್ಗ ವಿದ್ಯುದ್ದೀಕರಣ, ವಿಮಾನ ನಿಲ್ದಾಣ, ಕೂಡಗಿ ಥರ್ಮಲ್ ಪವರ್ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ಇಂಡಿಯ ರೇವಣಸಿದ್ಧೇಶ್ವರ ಏತ ನೀರಾವರಿಗೆ 3ಸಾವಿರ ಕೋಟಿ ರೂ. ಅನುದಾನ, ಗುರುತ್ವಾಕರ್ಷಣೆಯಿಂದ ಕೆರೆಗಳನ್ನು ತುಂಬಿಸುವುದು ಸೇರಿ ಜಲಜೀವನ್ ಮಿಷನ್‌ನಿಂದ ಪ್ರತಿ ಗ್ರಾಮದವರೆಗೂ ಕುಡಿಯುವ ನೀರು ದೊರೆಯುವಂತೆ ಮಾಡಿದ್ದೇನೆ ಎಂದರು.

ಇಂಡಿಯ ಎಲ್ಲ ಸಮಾಜದ ಜತೆ ಉತ್ತಮ ಸಂಬಂಧವಿದ್ದು, ಮುಂದೆ ಇನ್ನೂ ಒಳ್ಳೆಯ ಕಾರ್ಯ ಮಾಡಿ ಇಂಡಿಯ ಇತಿಹಾಸ ನಿರ್ಮಿಸುವ ಕಾರ್ಯ ಮಾಡುತ್ತೇನೆ. ನಾನು ಇಂಡಿ ತಾಲೂಕಿನವ ಎಂದು ಪ್ರತಿ ಬಾರಿಯೂ ನನ್ನನ್ನು ಹೆಚ್ಚಿನ ಮತ ನೀಡಿ ಬೆಂಬಲಿಸಿದ್ದೀರಿ. ಅದಕ್ಕೆ ಪ್ರತಿಯಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಚಂದ್ರಶೇಖರ ಕವಟಗಿ, ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ ಮಾತನಾಡಿದರು.

ಬಿ.ಎಸ್. ಪಾಟೀಲ ಹಿರೇಬೇವನೂರ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ಹಣಮಂತಗೌಡ ಪಾಟೀಲ, ಮಲ್ಲುಗೌಡ ಪಾಟೀಲ, ಅನೀಲಗೌಡ ಬಿರಾದಾರ, ಶ್ರೀಕಾಂತ ದೇವರ, ಅನೀಲ ಜಮಾದಾರ, ಶಂಕರಗೌಡ ಪಾಟೀಲ, ಶ್ರೀಪತಿಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ ಇತರರಿದ್ದರು.