ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿ ನಗರದ ಹೊರವಲಯದ ದುಮ್ಮಳ್ಳಿಯ ತೋಟವೊಂದರಲ್ಲಿ ಸೋಮವಾರ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸತೀಶ್ ನಾಯ್ಕ(28) ಹತ್ಯೆಗೀಡಾದವನು.
ದುಮ್ಮಳ್ಳಿಯಲ್ಲಿ ಜಮೀನು ಹೊಂದಿದ್ದ ಸತೀಶ್ ನಾಯ್ಕನನ್ನು ಬೆಳಗ್ಗೆ ತೋಟಕ್ಕೆ ಕರೆದೊಯ್ದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಕ್ಕದ ಜಮೀನಿನ ಅಖಿಲೇಶ್‌ನನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ನಮಗೂ ಮತ್ತು ಪಕ್ಕದ ಜಮೀನಿನ ಮಂಜಾ ನಾಯ್ಕ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯವೊಂದರ ವಿಚಾರಣೆ ನಡೆಯುತ್ತಿತ್ತು. ತೀರ್ಪು ನಮ್ಮ ಪರವಾಗಿತ್ತು. ಇದನ್ನು ಸಹಿಸಲಾಗದೇ ನನ್ನ ಮಗನನ್ನು ಮಂಜಾ ನಾಯ್ಕನ ಪುತ್ರ ಅಖಿಲೇಶ್ ಹತ್ಯೆ ಮಾಡಿದ್ದಾನೆ. ಆತನ ತಾಯಿಯೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶೇಷಾ ನಾಯ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸರು ಅಖಿಲೇಶ್‌ನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಹತ್ಯೆ ಖಂಡಿಸಿ ದುಮ್ಮಳ್ಳಿಯ ಆರೋಪಿ ಮನೆ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಮನೆಯಲ್ಲಿದ್ದ ಆರೋಪಿ ಹಾಗೂ ಆತನ ಕುಟುಂಬಸ್ಥರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕೊಂಡೊಯ್ದಿದ್ದಾರೆ.