ಬಂಡಿಪೂರ (ಜಮ್ಮು-ಕಾಶ್ಮೀರ): ಉಗ್ರರ ವಿರುದ್ದ ನಡೆಯುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ಇಂದು ಓರ್ವ ಯೋಧ ಗಾಯಗೊಂಡಿದ್ದಾನೆ ಎಂದು ರಕ್ಷಣಾ ವಲಯದ ಮೂಲಗಳು ಮಾಹಿತಿ ನೀಡಿವೆ.
ಇಂದು ಬೆಳಗ್ಗೆ ಇಂದ ಉಗ್ರರ ವಿರುದ್ದ ಜಂಟಿ ಕಾರ್ಯಾಚರಣೆ ಮುಂದುವರೆದಿದೆ. ಕೆಲ ಮಾಧ್ಯಮಗಳಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ನೈಜವಾಗಿ ಓರ್ವ ಯೋಧ ಮಾತ್ರ ಗಾಯಗೊಂಡಿದ್ದಾನೆ ಎಂದು ಪಿಆರ್ಒ ರಕ್ಷಣಾ ವಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)