ನ್ಯೂಸ್

ಮೋದಿ ಪ್ರಸ್ತಾವಕ್ಕೆ ಜಿ-7 ಬೆಂಬಲ: ಕೋವಿಡ್​ ಔಷಧದ ಪೇಟೆಂಟ್​ ಕೈಬಿಡುವಂತೆ ಪ್ರಧಾನಿ ಮನವಿ

ನವದೆಹಲಿ: ಕೋವಿಡ್​&19 ಲಸಿಕೆಗೆ ಸಂಬಂಧಿಸಿದ ಪೇಟೆಂಟ್​ ಅನ್ನು ಕೈಬಿಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಮನವಿಗೆ ಜಿ-7 ಶೃಂಗಸಭೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 'ಒಂದು ಭೂಮಿ, ಒಂದು ಆರೋಗ್ಯ' ಎಂದು ಮೋದಿ ಶನಿವಾರ ನೀಡಿದ್ದ ಸಂದೇಶಕ್ಕೂ ಸಭೆ ಮೆಚ್ಚುಗೆ ಸೂಚಿಸಿದೆ.

ಭಾನುವಾರ ನಡೆದ "ಮುಕ್ತ ಸಮಾಜ ಮತ್ತು ಮುಕ್ತ ಆರ್ಥಿಕತೆ' ವಿಷಯ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಪ್ರಜಾಪ್ರಭುತ್ವಕ್ಕೆ ನಾಗರಿಕ ಬದ್ಧತೆ, ಬೌದ್ಧಿಕ ಸ್ವಾತಂತ್ರ$್ಯಗಳು ಅಗತ್ಯವೆಂದು ಹೇಳಿದರು. ಆರೋಗ್ಯ, ಹವಾಮಾನ ಬದಲಾವಣೆ, ಆರ್ಥಿಕ ಪುನಶ್ಚೇತನ, ಸೈಬರ್​ ಸ್ಪೇಸ್​ ವಿಚಾರದಲ್ಲಿ ವಿಶ್ವ ಒಗ್ಗೂಡಬೇಕು. ಎಂದರು. ಪೇಟೆಂಟ್​ ಮನ್ನಾ ಕುರಿತು ಭಾರತ ಮತ್ತು ದಣ ಆಫ್ರಿಕಾ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಮಾಡಿರುವ ಮನವಿಗೆ ಶ್ರೀಮಂತ ದೇಶಗಳ ಕೂಟವಾದ ಜಿ&7 ನಾಯಕರು ದೃಢ ಬೆಂಬಲ ನೀಡಬೇಕೆಂದು ಶೃಂಗಸಭೆ ಉದ್ದೇಶಿಸಿ ವರ್ಚುವಲ್​ ಭಾಷಣದಲ್ಲಿ ಮೋದಿ ಮನವಿ ಮಾಡಿದ್ದರು. ಫ್ರಾನ್ಸ್​ನಲ್ಲಿ 2019ರ ಜಿ-7 ಶೃಂಗದ ನಂತರ ಮೋದಿ ಭಾಗವಹಿಸಿದ ಎರಡನೇ ಸಭೆ ಇದಾಗಿದೆ.

ಲ್ಯಾಬ್​ ಲೀಕ್​ ಚರ್ಚೆ: ಕರೊನಾ ಸೋಂಕಿಗೆ ಕಾರಣವಾದ ವೈರಸ್​, ಚೀನಾದ ವುಹಾನ್​ ಪ್ರಯೋಗಾಲಯದಿಂದ ಸೋರಿಕೆಯಾಗಿತ್ತು ಎಂಬ ಸಿದ್ಧಾಂತದ ಬಗ್ಗೆ ಜಿ-7 ನಾಯಕರು ಚರ್ಚೆ ನಡೆಸಿದ್ದಾರೆ. ಲ್ಯಾಬೊರೇಟರಿಯಿಂದ ವೈರಸ್​ ಲೀಕ್​ ಆಗಿರುವು ದನ್ನು ಚೀನಾ ಸತತವಾಗಿ ನಿರಾಕರಿಸುತ್ತಾ ಬಂದಿದೆ. ಕರೊನಾ ದಿಂದ ಜಾಗತಿಕ ಪರಿಸ್ಥಿತಿ ಉಧ್ವಸ್ಥಗೊಂಡಿರುವುದರಿಂದ ಬ್ರಿಟನ್​ ಈ ಸಾಲಿನ ಶೃಂಗಸಭೆಗೆ "ಮರಳಿ ಉತ್ತಮ ಸಮಾಜ ಕಟ್ಟಿ' ಎಂಬ ಘೋಷವಾಕ್ಯ ಸೂಚಿಸಿದೆ. ವಿಶ್ವ ಸಮುದಾಯಕ್ಕೆ ನೂರು ಕೋಟಿ ಲಸಿಕೆ ಡೋಸ್​ ನೀಡಲು ಮತ್ತೊಮ್ಮೆ ಸಭೆ ಬದ್ಧತೆ ವ್ಯಕ್ತಪಡಿಸಿತು.

ಭಾರತ ಜಿ-7 ರಾಷ್ಟ್ರಗಳ ಸಹಜ ಮಿತ್ರ. ನಿರಂಕುಶ ವಾದ, ಭಯೋತ್ಪಾದನೆ, ಹಿಂಸಾಚಾರ, ತಪು$್ಪ ಮಾಹಿತಿ, ಆರ್ಥಿಕ ದಬ್ಬಾಳಿಕೆತನದ ಬೆದರಿಕೆ ವಿರುದ್ಧ ಹೋರಾಟದ ಸಮಾನ ಮೌಲ್ಯವನ್ನು ಗೌರವಿಸುತ್ತದೆ.
|ನರೇಂದ್ರ ಮೋದಿ ಪ್ರಧಾನಿ

1. ದೆಹಲಿಯಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ 3.0 ಸೋಮವಾರದಿಂದ ಹಂತಹಂತವಾಗಿ ತೆರವಾಗಲಿದೆ. ಮಾಲ್​ಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪ್ರಕಟಿಸಿದ್ದಾರೆ.
2. 60 ವರ್ಷದ ವೃದ್ಧರೊಬ್ಬರ ಮಿದುಳಿನಲ್ಲಿದ್ದ ಕ್ರಿಕೆಟ್​ ಬಾಲ್​ ಗಾತ್ರದ ಬ್ಲ್ಯಾಕ್​ ಫಂಗಸ್​ಅನ್ನು ಪಟನಾದ ಐಜಿಐಎಂಎಸ್​ ವೈದ್ಯರು ಹೊರ ತೆಗೆದಿದ್ದಾರೆ.
3. ಮತ್ತೆ ಕರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವ ಚೀನಾದ ಗುವಾಂಗ್​ಝೊ ನಗರದಲ್ಲಿ ಜನರು ಮನೆಗಳಿಂದ ಹೊರ ಬಾರದಂತೆ ಕಣ್ಗಾವಲು ಇಡಲು 60 ಡ್ರೋನ್​ಗಳನ್ನು ನಿಯೋಜಿಸಲಾಗಿದೆ.
4. ಮಧ್ಯ ಪ್ರದೇಶದ ಇಂದೋರ್​ನಲ್ಲಿರುವ 5,000 ಪಾಕಿಸ್ತಾನಿ ಸಿಂಧಿ ಸಮುದಾಯದ ನಿರಾಶ್ರಿತರಿಗೆ ಕೋವಿಡ್​ ಲಸಿಕೆ ನೀಡಲಾಗಿದೆ.
5. ಸೋಮವಾರದಿಂದ 27 ಜಿಲ್ಲೆಗಳಲ್ಲಿ ಕರೊನಾ ಲಾಕ್​ಡೌನ್​ ನಿಯಮ ಸಡಿಲಿಸುವುದಾಗಿ ತಮಿಳು ನಾಡು ಸರ್ಕಾರ ಪ್ರಕಟಿಸಿದೆ.

ಅಮೆರಿಕದಲ್ಲಿ ಕೊವ್ಯಾಕ್ಸಿನ್​ ಪರೀಕ್ಷೆ
ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿ ಅಮೆರಿಕದಲ್ಲಿ ಶ್ರೀದಲ್ಲೇ ಪರೀೆ ಆರಂಭಿಸಲಿದೆ. ಈ ವಿಚಾರದಲ್ಲಿ ಇದುವರೆಗೆ ನಡೆಸಲಾದ ಅಧ್ಯಯನಗಳ ಎಲ್ಲ ವಿವರಗಳನ್ನು ಅಮೆರಿಕದ ಪ್ರಾಧಿಕಾರಗಳ ಜತೆ ಹಂಚಿಕೊಂಡಿದೆ. ಮೂರನೇ ಹಂತದ ಪರೀೆಯ ವಿಶ್ಲೇಷಣಾ ದತ್ತಾಂಶವನ್ನು ಶ್ರೀವೇ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ. ಕೊವ್ಯಾಕ್ಸಿನ್​ ಲಸಿಕೆಯ ಎಲ್ಲ ಸಂಶೋಧನಾ ಡೇಟಾವನ್ನು ಭಾರತದಲ್ಲಿನ ಸಂಬಂಧಿತ ನಿಯಂತ್ರಣ ಪ್ರಾಧಿಕಾರದವರು ಆಮೂಲಾಗ್ರವಾಗಿ ಪರಿಶೀಲಿಸಿದ್ದಾರೆ. ಕಳೆದ 12 ತಿಂಗಳಲ್ಲಿ ಐದು ಜಾಗತಿಕ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆಗಳಲ್ಲಿ ಕಂಪನಿ ಒಂಬತ್ತು ಸಂಶೋಧನಾ ಅಧ್ಯಯನ ವರದಿಗಳನ್ನು ಪ್ರಕಟಿಸಿದೆ. ಕೋವಿಡ್​ ಬಗ್ಗೆ ಇಷ್ಟು ಸಂಶೋಧನಾ ವರದಿ ಪ್ರಕಟಿಸಿರುವ ಮತ್ತು ತಲೆಯೆತ್ತಬಹುದಾದ ರೂಪಾಂತರಿಗಳ ಬಗ್ಗೆ ಡೇಟಾ ಪ್ರಕಟಿಸಿದ ಏಕೈಕ ಕಂಪನಿಯೂ ಆಗಿದೆ ಎಂದು ಭಾರತ್​ ಬಯೋಟೆಕ್​ ಹೇಳಿಕೊಂಡಿದೆ.