ಬಿಹಾರ: ದಿನಪತ್ರಿಕೆಗಳಲ್ಲಿ ಮದುವೆ ಜಾಹೀರಾತುಗಳು ಸರ್ವೇಸಾಮಾನ್ಯ. ಇಲ್ಲೊಬ್ಬ ವ್ಯಕ್ತಿ ತನ್ನ ಕುಟುಂಬದಲ್ಲಿ ದೇಶಭಕ್ತಿ ಇರಬೇಕು ಎಂಬ ಕಾರಣದಿಂದ ತೀವ್ರ ದೇಶಭಕ್ತಿ ಹೊಂದಿರುವ ಯುವತಿಯೇ ಬೇಕು ಎನ್ನುವ ಜಾಹೀರಾತು ನೀಡಿದ್ದು ಅದೀಗ ಸಖತ್ ವೈರಲ್ ಆಗಿದೆ.
ಡಾ.ಅಭಿನವ್ ಕುಮಾರ್ ಎಂಬ 31 ವರ್ಷದ ವೈದ್ಯ ತನಗೆ ಮದುವೆಗೆ ವಧು ಬೇಕು ಎಂದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾನೆ. ತಾನು ಪ್ರಸ್ತುತ ಕೆಲಸ ಮಾಡುತ್ತಿಲ್ಲ ಎಂದು ಹೇಳಿಕೊಂಡಿರುವ ಆ ವ್ಯಕ್ತಿಯು ತನಗೆ ಅತ್ಯಂತ ದೇಶಪ್ರೇಮ ಹೊಂದಿರುವ ಯುವತಿಯೇ ಬೇಕು ಎಂದು ಹೇಳಿಕೊಂಡಿದ್ದಾನೆ. ಇದರ ಜತೆ ಯುವತಿಯು ನ್ಯಾಯಯುತ, ಸುಂದರ, ನಿಷ್ಠಾವಂತ, ವಿಶ್ವಾಸಾರ್ಹ, ಪ್ರೀತಿ ಕಾಳಜಿಯುಳ್ಳ ಧೈರ್ಯಶಾಲಿ, ಶಕ್ತಿಯುತ ಶ್ರೀಮಂತೆಯಾಗಿರಬೇಕು ಎಂದು ಆತ ಹೇಳಿಕೊಂಡಿದ್ದಾನೆ. ಅತ್ಯಂತ ದೇಶಭಕ್ತೆಯಾಗಿರಬೇಕಾದ ಆಕೆ ಮಿಲಿಟರಿ ಮತ್ತು ಕ್ರೀಡಾ ಸಾಮರ್ಥ್ಯವನ್ನು ಹೊಂದಿರಲೇಬೇಕು ಎನ್ನುವ ಆಸೆಯನ್ನು ಆತ ಬಿಚ್ಚಿಟ್ಟಿದ್ದಾನೆ.
ಫೇಸ್ಬುಕ್ನಲ್ಲಿ ಈ ಜಾಹೀರಾತಿನ ಫೋಟೋ ಕಂಡುಬಂದಿದ್ದು ಸಾಕಷ್ಟು ಜನರಿಂದ ಟ್ರೋಲ್ಗೆ ಒಳಗಾಗಿದೆ. (ಏಜೆನ್ಸೀಸ್)