ಮಹಾರಾಷ್ಟ್ರ: ಅಂದು ಮನೆಗೆ ಬೇಡವಾದ ಮಗು ಇಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ನೇಮಕಗೊಂಡು, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಹೌದು, ಓರಿಸ್ಸಾ ಮೂಲದ 2019ನೇ ಬ್ಯಾಚ್ನ IAS ಅಧಿಕಾರಿ ಸಂಜಿತಾ ಮಹೋಪಾತ್ರ, ಜೀವನದಲ್ಲಿ ತನಗೆ ಎದುರಾದ ಕಷ್ಟಗಳನ್ನು, ಅಡೆ ತಡೆಗಳನ್ನು ಮೆಟ್ಟಿನಿಂತು ಐಎಎಸ್ ಅಧಿಕಾರಿಯಾಗುವ ಮೂಲಕ ಐಎಎಸ್ ಸೇರಿ ಇತರ ಸ್ಪರ್ಧಾತ್ಮಕ ಅಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಗುಡ್ಬೈ ಹೇಳಲು ನಿರ್ಧರಿಸಿರುವೆ; ಬಿಟೌನ್ ನಟಿ ಮಂದನಾ ಕರಿಮಿ ಹೀಗೆಳಿದ್ದೇಕೆ? | Mandana Karimi
ಇತ್ತೀಚಿನಗೆ ನಡೆದ ಪ್ರತಿಕಾಗೋಷ್ಠಿಯಲ್ಲಿ ಸಿಇಒ ಸಂಜಿತಾ ಮಹೋಪಾತ್ರ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಅವರೇ ಹೇಳಿಕೊಳ್ಳುಂತೆ, '' ಒರಿಸ್ಸಾದ ಬಡ ಕುಟುಂಬದಲ್ಲಿ ಜನಿಸಿದ ನಾನು ಮೂಲತ ಹಳ್ಳಿಯವಳು. ನಾನು ಹುಟ್ಟಿದ ತಕ್ಷಣ ಯಾರು ಖುಷಿ ಪಡಲಿಲ್ಲ, ಏಕೆಂದರೆ ಎಲ್ಲರಿಗೂ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಅದರಲ್ಲಿ ನನ್ನ ತಾಯಿ ತುಂಬಾ ನಿರಾಶೆಗೊಂಡಿದ್ದರು. ಈ ವಿಷಯ ನನ್ನ ಅರಿವಿಗೆ ಬಂದಿದ್ದು ಫ್ರೌಢಶಾಲೆಯಲ್ಲಿ. ನನ್ನನ್ನು ನನ್ನ ಕುಟುಂಬ ಸಂಪೂರ್ಣ ದೂರವಿಟ್ಟರು. ನನ್ನ ಅಕ್ಕ ಒತ್ತಾಸೆಯಿಂದ ನಾನು ಮತ್ತೆ ತಾಯಿಯ ಮಡಿಲಿಗೆ ಸೇರಿದೆ ಎಂದು ಹೇಳಿದ್ದಾರೆ.''
ಮಹೋಪಾತ್ರ ಅವರ ಜೀವನ ಬಹಳ ಅರ್ಥಿಕ ಪರಿಸ್ಥಿತಿಯ ಅಡೆತಡೆಗಳಿಂದ ಕೂಡಿತ್ತು. ತನ್ನ ಶಿಕ್ಷಣದ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಮಾಜಿಕ ಸಂಸ್ಥೆ, ಶಿಕ್ಷಕರು ಮತ್ತು ವಿದ್ಯಾರ್ಥಿವೇತನವನ್ನು ಅವಲಂಭಿಸಬೇಕಾಗಿತ್ತು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಗಳಿಸಿದ ನಂತರ, ಅವರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡರು ಮತ್ತು ಈ ಅವಧಿಯಲ್ಲಿ, ಅವರು ತಮ್ಮ ಹಳ್ಳಿಯಲ್ಲಿ ಮನೆ ನಿರ್ಮಿಸಲು ಪಾಲಕರಿಗೆ ಸಹಾಯ ಮಾಡಿದ್ದಾಗಿ ಸ್ಮರಿಸಿಕೊಂಡರು.
ಮೊಹಾಪಾತ್ರ ತನ್ನ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಣಯ ಮಾಡಿದ್ದರು. ಹೀಗಾಗಿ, ಅವರ ಪತಿಯ ಪ್ರೇರಣೆ ಮತ್ತು ಬೆಂಬಲದೊಂದಿಗೆ, ಅವರು 2019 ರಲ್ಲಿ ತನ್ನ ಐದನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆಕೆಯ ಸಾಧನೆಯ ಬಗ್ಗೆ ಆಕೆಯ ಪಾಲಕರು ಇದೀಗ ಹೆಮ್ಮೆಪಡುತ್ತಿದ್ದಾರೆ ಎಂದು ಅವರು ಹೇಳಿದರು.(ಏಜೆನ್ಸೀಸ್)