ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಶೋಧನಾ ಸಂಸ್ಥೆ ’ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್’ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಯೂ ಆಗ್ರ ಸ್ಥಾನ ಕಾಯ್ದು ಕೊಂಡಿದ್ದಾರೆ. ಈ ಸಾರಿ ಅವರಿಗೆ ಶೇ. 72 ರೇಟಿಂಗ್ ಸಿಕ್ಕಿದೆ.
- ಪ್ರಧಾನಿ ನರೇಂದ್ರ ಮೋದಿಗೆ 72%
- ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಲೋಪೆಜ್ 64%
- ಇಟಲಿ ಪ್ರಧಾನಿ ಮಾರಿಯೋ ಡಾಗ್ರಿ 57%
- ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ 47%
- ಜರ್ಮನಿ ಚಾನ್ಸಲರ್ ಓಲಾಫ್ ಸ್ಕೋಲ್ಜ 42%
- ಅಮೆರಿಕ ಅಧ್ಯಕ್ಷ ಜೋ ಬೈಡೆನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊ 41.
- ಸ್ಪೇನ್ನ ಪ್ರಧಾನಿ ಪೆಡ್ರೊ ಸ್ಯಾಂಚೆಜ್ 37%
- ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ 36%
- ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ 35%
- ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 30%
ಮಾರ್ನಿಂಗ್ ಕನ್ಸಲ್ಟ್ ರಾಜಕೀಯಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಯನ್ನು ವಿಶ್ಲೇಷಿಸುವ ಸಂಸ್ಥೆಯಾಗಿದ್ದು, ಅಧಿಕಾರಸ್ಥ ನಾಯಕರು ಮತ್ತು ದೇಶದ ಪಥ ಬದಲಿಸುವ ಮುಖಂಡರು ದೇಶದೊಳಗೆ ಮತ್ತು ಜಾಗತಿಕವಾಗಿ ಬೀರುವ ಪ್ರಭಾವವನ್ನು ಆಧರಿಸಿ ರೇಟಿಂಗ್ ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ 13 ದೇಶಗಳ ನಾಯಕರನ್ನು ವಿಶ್ಲೇಷಿಸಿದೆ.