ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪಾ 2' ಸಿನಿಮಾ 2024 ರಲ್ಲಿ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ ಎಂಬ ವದಂತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ: ಚಂದ್ರಯಾನ ಯಶಸ್ಸು ಸಹಿಸದ ಬ್ರಿಟನ್ ಮಂದಿ: ವಿದೇಶಿ ನೆರವು ನಿಲ್ಲಿಸಲು ಒತ್ತಾಯ, ಭಾರತೀಯರ ತಿರುಗೇಟು ಹೀಗಿತ್ತು…
ಸುಕುಮಾರ್ ನಿರ್ದೇಶನದ 'ಪುಷ್ಪಾ 2' ಚಿತ್ರದಲ್ಲಿ ಅಲ್ಲು ಅರ್ಜುನ್ ಅವರನ್ನು ವಿಶಿಷ್ಟವಾಗಿ ಅಭಿಮಾನಿಗಳಿಗೆ ತೋರಿಸಬೇಕು ಎಂದು ಕಸರತ್ತು ಮಾಡುತ್ತಿರುವ ನಿರ್ದೇಶಕರು, ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿರುವ ವದಂತಿ ಪ್ರಕಾರ, ಚಿತ್ರ 22 ಮಾರ್ಚ್, 2024 ರಂದು ಬಿಡುಗಡೆಯಾಗಲು ಸಜ್ಜಾಗಿದೆ ಎನ್ನಲಾಗಿದೆ. ಇದೇ ಖಚಿತ ದಿನಾಂಕ ಎಂದು ಹೇಳಲಾಗಿದ್ದು, ಸದ್ಯ ಈ ಬಗ್ಗೆ ಚಿತ್ರತಂಡದಿಂದ ಹೊರಬೀಳುವ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.
ಗುರುವಾರ (ಆಗಸ್ಟ್ 24) 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಐಕಾನ್ ಸ್ಟಾರ್, ಅಲ್ಲು ಅರ್ಜುನ್ ತಮ್ಮ ಮುಡಿಗೇರಿಸಿಕೊಂಡರು. ಈ ಮುಖೇನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: DK Shivakumar Press Conference In KPCC Office, Bengaluru | ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ
ಸದ್ಯ 'ಪುಷ್ಪಾ 2' ಚಿತ್ರವು ಇನ್ನೂ ನಿರ್ಮಾಣ ಹಂತದಲ್ಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಧನಂಜಯ್, ಪ್ರಕಾಶ್ ರಾಜ್, ಅನುಸೂಯಾ ಭಾರಧ್ವಾಜ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).