ನ್ಯೂಸ್

ನ.12ಕ್ಕೆ ಡುಂಡಿರಾಜರ ಕಾಯುವ ಕಾಯಕ ನಾಟಕ ಪ್ರದರ್ಶನ

ಬೆಂಗಳೂರು: ಅಂತರಂಗ ತಂಡದಿಂದ ಖ್ಯಾತ ಕವಿ ಡುಂಡಿರಾರ ಕಾಯುವ ಕಾಯಕ ಹೊಸ ನಾಟಕ ನ.12ಕ್ಕೆ ಪ್ರದರ್ಶನಗೊಳ್ಳಲಿದೆ.

ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಂಜೆ 7.15ಕ್ಕೆ ನಾಟಕ ಪ್ರದರ್ಶನವಿದ್ದು, ಈ ನಾಟಕ ಪ್ರದರ್ಶನದಿಂದ ಬರುವ ಹಣವನ್ನು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಅರ್ಪಣಾ ಸೇವಾ ಸಂಸ್ಥೆಗೆ ನೀಡಲು ತಂಡ ನಿರ್ಧರಿಸಿದೆ.

ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಧಿಗ್ದತೆ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವನ್ನೂ ಒಳಗೊಂಡ ಮತ್ತು ಇವೆಲ್ಲವನ್ನೂ ಮೀರಿದ ಸಂಗತಿಗಳ ಪ್ರಸ್ತುತಿಯನ್ನು ಸೊಗಸಾಗಿ ಡುಂಡಿರಾಜ್ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅರ್ಚನಾ ಶ್ಯಾಮ್ ಈ ನಾಟಕದ ನಿರ್ದೇಶನ ಮತ್ತು ರಂಗವಿನ್ಯಾಸ ಮಾಡಿದ್ದು, ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ: 98809 14509 ಸಂಪರ್ಕಿಸಿ.