ನ್ಯೂಸ್

ಸುಖಾಸುಮ್ಮನೆ ನನ್ನ ಮಗನನ್ನ ಬಂಧಿಸಿದ್ದಾರೆ; ಇದು ಪೊಲೀಸರದ್ದೇ ಕುತಂತ್ರ; ಸಿಸಿಟಿವಿ ವಿಡಿಯೋ ವೈರಲ್​​

ಉತ್ತರಪ್ರದೇಶ: ಉತ್ತರಪ್ರದೇಶದ ಮೀರತ್​​​​ನಲ್ಲಿ ಪೊಲೀಸರು ಅನಾವಶ್ಯಕವಾಗಿ ವ್ಯಕ್ತಿಯೊಬ್ಬನನ್ನ ಬಂಧಸಿರುವ ಘಟನೆ ವರದಿಯಾಗಿದೆ. ಪೊಲೀಸರು ಆತನ್ನನ್ನ ಬಂಧಿಸಿರುವಂತಹ ಸಿಸಿಟಿವಿ ದೃಶ್ಯದಲ್ಲಿ ಸತ್ಯಾಂಶ ಹೊರಬಿದ್ದಿದೆ. ಈ ಬಗ್ಗೆ ಬಂಧಿತ ವ್ಯಕ್ತಿಯ ಕುಟುಂಬಸ್ಥರು ದೂರನ್ನೂ ದಾಖಲಿಸಿದ್ದಾರೆ.


ಹುಡುಗನ ಮನೆಯ ಬಳಿ ಬಂದ ಪೊಲೀಸರು ಅಲ್ಲೇ ನಿಲ್ಲಿಸಿದ್ದ ಬೈಕ್​​​ನೊಳಗೆ ಮೊದಲೇ ಗನ್​​​ ಇಟ್ಟಿದ್ದಾರೆ. ತದನಂತರ ಮನೆಯೊಳಗಿದ್ದ ಹುಡುಗನನ್ನು ಕರೆದು ನಿನ್ನ ಬೈಕ್​​ನಲ್ಲಿ ಗನ್​ ಇತ್ತು. ಭೂ ವಿವಾದ ಪ್ರಕರಣದಲ್ಲಿ ಸಿಲುಕಿರುವ ಅಶೋಕ್ ತ್ಯಾಗಿ ಎಂಬ ವ್ಯಕ್ತಿಯ ಮನೆಯಲ್ಲಿ ಘಟನೆ ನಡೆದಿದ್ದು, ತ್ಯಾಗಿ ಅವರ ಪತ್ನಿ ರಾಖಿ ಅಕ್ರಮವಾಗಿ ಮನೆಯಲ್ಲಿ ಆಯುಧಗಳನ್ನ ಇಟ್ಟುಕೊಂಡಿರುವುದಾಗಿ ಆರೋಪಿಸಿ ಅವರ ಮಗ ಅಂಕಿತ್​​​​​​ನನ್ನು ಪೊಲೀಸರು ಬಂಧಿಸಿದ್ದಾರೆ.


ದೂರು ದಾಖಲಿಸಿರುವ ಸಂದರ್ಭ ಅಶೋಕ್​​ ತ್ಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರಿಗೆ ನೀಡಿದ್ದಾರೆ. ಹಂಚಿಕೊಂಡಿರುವ ಸಿಸಿಟಿವಿ ವೀಡಿಯೋದಲ್ಲಿ ಮೊದಲು ಪೊಲೀಸ್ ಅಧಿಕಾರಿಗಳ ಗುಂಪು ಮನೆಗೆ ಪ್ರವೇಶಿಸುವುದನ್ನು ಕಾಣಬಹುದು. ನಂತರ ಒಬ್ಬ ಪೊಲೀಸ್​​ ಅಧಿಕಾರಿ ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್‌ನಲ್ಲಿ ಏನನ್ನೋ ಇಡುತ್ತಾನೆ. ನಂತರ, ಬೇರೆ ಬೇರೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮೋಟಾರ್‌ಸೈಕಲ್‌ನಿಂದ ಪಿಸ್ತೂಲ್ ಅನ್ನು ಹಿಂಪಡೆಯುತ್ತಿದ್ದೇವೆ. ನಿಮ್ಮ ಮನೆಯಲ್ಲಿ ಅಕ್ರಮವಾಗಿ ಆಯುಧಗಳನ್ನ ಇಟ್ಟುಕೊಂಡಿದ್ದೀರಿ ಎಂದು ಮಗ ಅಂಕಿತ್​​ ಮೇಲೆ ಸುಳ್ಳು ಆರೋಪವನ್ನ ಮಾಡಿದ್ದಾರೆ ಎಂದು ಹೇಳಲಾಗಿದೆ.


ಜತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೀರತ್ ಪೊಲೀಸ್ ಅಧೀಕ್ಷಕ ದೇಹತ್ ಕಮಲೇಶ್ ಬಹದ್ದೂರ್ ಅವರು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಭರವಸೆ ನೀಡಿದ್ದಾರೆ. ಇಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆವ ಪೊಲೀಸರದ್ದೇ ತಪ್ಪಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.