ನ್ಯೂಸ್

ಚೀನಾದ ಮಧ್ಯ ಹುಬೈ ಪ್ರಾಂತ್ಯದಲ್ಲಿ ಬುಧವಾರ ಒಂದೇ ದಿನ 254 ಮಂದಿ ಕೊರೊನಾ ವೈರಸ್​ಗೆ ಬಲಿ: ತುರ್ತು ಪರಿಸ್ಥಿತಿ ಘೋಷಿಸಿದ ಚೀನಾ ಸರ್ಕಾರ

ನವದೆಹಲಿ: ಚೀನಾದ ಮಧ್ಯ ಹುಬೈ ಪ್ರಾಂತ್ಯದಲ್ಲಿ ಬುಧವಾರ ಒಂದೇ ದಿನ ಕನಿಷ್ಟ 254 ಮಂದಿ ಕೊರೊನಾ ವೈರಸ್​ಗೆ ಬಲಿಯಾಗಿದ್ದಾರೆ.

ಮಧ್ಯ ಹುಬೈ ಪ್ರಾಂತ್ಯದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲದೆ ವೈರಸ್​ ಹರಡುವುದನ್ನು ನಿಯಂತ್ರಿಸಲು ವಿಫಲರಾದ ಹುಬೈ ಪ್ರಾಂತ್ಯದ ಉನ್ನತ ಅಧಿಕಾರಿಯನ್ನು ಸರ್ಕಾರ ವಜಾಗೊಳಿಸಿದೆ.

ಇದುವರೆಗೆ ಸಂಭವಿಸಿದ ಸಾವುಗಳಲ್ಲಿ ಬುಧವಾರ ಸಂಭವಿಸಿದ ಸಾವು ಅಧಿಕವಾಗಿದೆ. ಎಲ್ಲ ಕಟ್ಟಡಗಳನ್ನು ಮುಚ್ಚಲಾಗಿದೆ. ಜನರನ್ನು ಹೊರಗೆ ಬರದಂತೆ ತಡೆಯಲಾಗಿದೆ. ವೈರಸ್​ ನಿಯಂತ್ರಣಕ್ಕಾಗಿ ನಿಯೋಜಿತರಾಗಿರುವವರನ್ನು ಮಾತ್ರ ಮನೆಯಿಂದ ಹೊರಗೆ ಬರುವಂತೆ ಸರ್ಕಾರ ಸೂಚಿಸಿದೆ.

ಹುಬೈ ಪ್ರಾಂತ್ಯ ಹಾಗೂ ರಾಜಧಾನಿ ವುಹಾನ್​ನಲ್ಲಿ ಬುಧವಾರ ಅಂದಾಜು 15,152 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಇವರಲ್ಲಿ 13,332 ಮಂದಿಯಲ್ಲಿ ವೈರಸ್​ ಪತ್ತೆಯಾಗಿದೆ. ಮಾರಕ ವೈರಸ್​ಗೆ ವಿಶ್ವಸಂಸ್ಥೆ Covid-19. ಎಂದು ನಾಮಕರಣ ಮಾಡಿದೆ.

ಇಡೀ ಚೀನಾದಲ್ಲಿ ಬುಧವಾರ ಅಂದಾಜು 60 ಸಾವಿರ ಮಂದಿ Covid-19. ಕ್ಕೆ ತುತ್ತಾಗಿದ್ದಾರೆ. ಅಲ್ಲದೆ ಪ್ರತಿದಿನ ವೈರಸ್​ ತೀವ್ರವಾಗಿ ಹರಡುತ್ತಿದೆ.

ಬುಧವಾರ ಆಸ್ಪತ್ರೆಯಿಂದ ಅಂದಾಜು 3,441 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ವೈರಸ್​ ಪತ್ತೆಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದರೂ ಇವರು ಆರೋಗ್ಯ ಕಾರ್ಯಕರ್ತರು ನಿಗಾ ವಹಿಸಲಿದ್ದಾರೆ. ಆಸ್ಪತ್ರೆಗೆ ದಾಖಲಾದ 33,693 ರೋಗಿಗಳಲ್ಲಿ, 5,647 ಮಂದಿ ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್​)