ಸ್ಪಂದನಶ್ರೀ ಪುರಸ್ಕೃತೆ ಪವಿತ್ರಾ ವೈ.ಸುಂದರೇಶನ್. 
ನ್ಯೂಸ್

6ರಂದು ಪವಿತ್ರಾಗೆ ಸ್ಪಂದನ ಶ್ರೀ ಪ್ರಶಸ್ತಿ ಪ್ರದಾನ

ಶಿವಮೊಗ್ಗ: ಭದ್ರಾವತಿ ತಾಲೂಕಿನ ತಮ್ಮಡಿಹಳ್ಳಿಯ ಸ್ಪಂದನ ಏಜುಕೇಶನ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನಿಂದ ಸ್ಪಂದನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಸ್ಪಂದನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜ.6ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸಿ.ಪ್ರಸಾದ್ ತಿಳಿಸಿದರು.

ಬೆಂಗಳೂರಿನ ವಿಂದ್ಯಾ ಇ-ಇನ್‌ಫೋಮೀಡಿಯಾ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ ವೈ ಸುಂದರೇಶನ್ ಅವರು ಈ ವರ್ಷದ ಸ್ಪಂದನಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇನ್ಫೋಮೀಡಿಯಾ ಸಂಸ್ಥೆಯ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಪವಿತ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಆರ್.ತಿಪ್ಪೇಸ್ವಾಮಿ, ಶಿವಮೊಗ್ಗ ಜಿಪಂ ಮಾಜಿ ಸದಸ್ಯೆ ವೈ.ಡಿ.ಉಷಾ, ಹೊಸೂರು ಕಂಬದಾಳು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎನ್.ಜಗದೀಶ್, ಸದಸ್ಯ ಜಿ.ಸಂತೋಷ್ ತಮ್ಮಡಿಹಳ್ಳಿ, ಸ್ಪಂದನ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಎಲ್.ಭಾಗ್ಯ, ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ರೇಖಾವತಿ ಉಪಸ್ಥಿತರಿರುವರು ಎಂದರು.
ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ರೇಖಾವತಿ, ಸಹ ಶಿಕ್ಷಕಿಯರಾದ ಸತ್ಯಭಾಮಾ, ಫರ್ಹಾನಾಜ್ ಸುದ್ದಿಗೋಷ್ಠಿಯಲ್ಲಿದ್ದರು.