ಶೃಂಗೇರಿಯ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 
ನ್ಯೂಸ್

26ಕ್ಕೆ ಶೃಂಗೇರಿ ಕಿರಿಯ ಶ್ರೀಗಳಿಂದ ಆರ್ಯ ಕಾಲೇಜು ಉದ್ಘಾಟನೆ

ಶಿವಮೊಗ್ಗ: ಎಲ್‌ಬಿಎಸ್ ನಗರದ 2ನೇ ಕ್ರಾಸ್‌ನಲ್ಲಿರುವ ಆರ್ಯ ವಿಜ್ಞಾನ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಜೂ.26ರ ಬೆಳಗ್ಗೆ 9.30ಕ್ಕೆ ಶೃಂಗೇರಿಯ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಉದ್ಘಾಟಿಸುವರು ಎಂದು ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ತಿಳಿಸಿದರು.

ಶಿವಮೊಗ್ಗ ನಗರಕ್ಕೆ ವಿಜ್ಞಾನ ಪಿಯು ಕಾಲೇಜಿನ ಅವಶ್ಯಕತೆ ಮನಗಂಡು ಎಲ್ಲ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಕಾಲೇಜನ್ನು ಈ ವರ್ಷದಿಂದಲೇ ಆರಂಭಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಕ್ಕಳು ಬುದ್ಧಿವಂತರಾಗುತ್ತಾರೆಂಬ ನಂಬಿಕೆಯಿಂದ ಪಾಲಕರು ಶೃಂಗೇರಿ ಕ್ಷೇತ್ರಕ್ಕೆ ಹೋಗಿ ಮಕ್ಕಳ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಇದೀಗ ಶಿವಮೊಗ್ಗಕ್ಕೆ ಕಿರಿಯ ಶ್ರೀಗಳು ಆಗಮಿಸುತ್ತಿದ್ದು ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಶ್ರೀಗಳಿಂದ ಸರಸ್ವತಿ ಪೂಜೆ, ಧೂಳಿಪೂಜೆ ನೆರವೇರಿಸಲಾಗುವುದು. ನಂತರ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿ ಭಕ್ತರಿಗೆ ಲಮಂತ್ರಾಕ್ಷತೆ ನೀಡುವರು. ಶಿವಮೊಗ್ಗ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಡಾ. ಪಿ.ನಾರಾಯಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಮಂಜುನಾಥ ಭಂಡಾರಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಕಾಲೇಜಿನಲ್ಲಿ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಕ್ಲಾಸ್ ರೂಮ್, 3 ಸುಸಜ್ಜಿತ ಲ್ಯಾಬ್‌ಗಳಿದ್ದು ಪಿಯು ಪಾಠದ ಜತೆ ಜತೆಯೇ ನೀಟ್, ಜೆಇಇ ಪರೀಕ್ಷೆಗೂ ತರಬೇತಿ ನೀಡಲಾಗುವುದು. ಉತ್ತಮ ಉಪನ್ಯಾಸಕರಿದ್ದಾರೆ ಎಂದರು. ಖಜಾಂಚಿ ಬಿ.ಜೆ.ಸುನೀತಾದೇವಿ, ಉಪನ್ಯಾಸಕರಾದ ಕಣ್ಣನ್, ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.