ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಅಧ್ಯಕ್ಷ ಬಿ.ಶಿವರಾಜ್ ಮಾತನಾಡಿದರು. ಕೆ.ಬಿ.ಉಮೇಶ್, ಪ್ರದೀಪ್ ಎಲಿ, ಉಮೇಶ್ ಹಿರೇಮಠ್, ನವೀನ್ ವಾರದ್, ಡಿ.ಸಿ.ಕಿರಣ್, ಗೌರಮ್ಮ ಷಡಾಕ್ಷರಿ, ಶಾರದಾ ಜಯಣ್ಣ ಸುದ್ದಿಗೋಷ್ಠಿಯಲ್ಲಿದ್ದರು. 
ನ್ಯೂಸ್

13ರಂದು ಶ್ರೀ ವೀರಭದ್ರೇಶ್ವರ ಜಯಂತೋತ್ಸವ, ಧರ್ಮಸಭೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆಯನ್ನು ಸೆ.13ರಂದು ಬೆಳಗ್ಗೆ 11.30ಕ್ಕೆ ಚೌಕಿ ಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಶಿವರಾಜ್ ಹೇಳಿದರು.

ಪ್ರತಿ ವರ್ಷ ಭಾದ್ರಪದ ಮಾಸದ ಮೊದಲನೇ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತೋತ್ಸವ ಆಚರಿಸಲಾಗುತ್ತದೆ. ಸೆ.3ರಿಂದ ಪ್ರತಿ ಮನೆ ಮನೆ, ಗ್ರಾಮ ಗ್ರಾಮಗಳಲ್ಲಿ ಜಯಂತೋತ್ಸವ ಆರಂಭಿಸಲಾಗಿದೆ. ಆ ಸಂಬಂಧ 13ರಂದು ಧರ್ಮಸಭೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 7ಕ್ಕೆ ಗಾಂಧಿಬಜಾರ್ ಬಸವೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭದೊಂದಿಗೆ ಮಹಿಳೆಯರು ಚೌಕಿ ಮಠಕ್ಕೆ ಆಗಮಿಸುವರು. ನಂತರ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ, ಅದಾದ ಬಳಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬೆಳಗ್ಗೆ 9.30ರಿಂದ 4ನೇ ತರಗತಿ ಮಕ್ಕಳಿಗೆ ಶಿವಶರಣ ಶರಣೆಯರ ವೇಷಭೂಷಣ ಸ್ಪರ್ಧೆ, 5ರಿಂದ 8ನೇ ತರಗತಿ ಮಕ್ಕಳಿಗೆ ಲಿಖಿತ ವಚನ ಸ್ಪರ್ಧೆ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳ ನಂತರ ಚಿತ್ರ ಕಲಾವಿದ ಡಾ. ಆರ್.ಎಸ್.ರಾಜೇಶ್ ಅವರಿಂದ ವಚನಗಳ ಭಾವಕ್ಕೆ ಚಿತ್ರ ಮತ್ತು ಶಿಲ್ಪವೈಭವ ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಅಂದು ಬೆಳಗ್ಗೆ 11.30ಕ್ಕೆ ಸಿರಿಗೆರೆಯ ತರಳಬಾಳು ಬೃಹ್ಮಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಧರ್ಮಸಭೆ ಸಾನ್ನಿಧ್ಯ ವಹಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಬಿ.ಕೆ.ಸಂಗಮೇಶ್ವರ್, ಡಿ.ಜಿ.ಶಾಂತನಗೌಡ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದರು.
ವೇದಿಕೆ ಉಪಾಧ್ಯಕ್ಷರಾದ ಕೆ.ಬಿ.ಉಮೇಶ್, ಪ್ರದೀಪ್ ಎಲಿ, ಉಮೇಶ್ ಹಿರೇಮಠ್, ಪ್ರಧಾನ ಕಾರ್ಯದರ್ಶಿ ನವೀನ್ ವಾರದ್, ಸಂಘಟನಾ ಕಾರ್ಯದರ್ಶಿ ಡಿ.ಸಿ.ಕಿರಣ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗೌರಮ್ಮ ಷಡಾಕ್ಷರಿ, ಮಧ್ಯ ಕರ್ನಾಟಕದ ಉಪಾಧ್ಯಕ್ಷೆ ಶಾರದಾ ಜಯಣ್ಣ, ಲೋಲಾಕ್ಷಿ, ಭವ್ಯ ಪ್ರವೀಣ್, ರಾಜಶೇಖರ್, ಧನರಾಜ್ ಸುದ್ದಿಗೋಷ್ಠಿಯಲ್ಲಿದ್ದರು.