ನ್ಯೂಸ್

ಶುದ್ಧ ಪ್ರಸಾದಕ್ಕೆ ಹಿಂದೂ ಅಂಗಡಿಗಳಿಗೆ ಓಂ ಪ್ರಮಾಣ ಪತ್ರ

ಬೆಂಗಳೂರು:ಸದ್ಯದ ಪರಿಸ್ಥಿಯಲ್ಲಿ ಎಲ್ಲೆಡೆ ಆಕಳ ಚರ್ಮದಿಂದ ತಯಾರಿಸಿದ ತುಪ್ಪ, ಖೊವಾ, ಪೇಢೆ ಇವುಗಳನ್ನು ಪ್ರಸಾದವೆಂದು ಬಹಿರಂಗವಾಗಿ ವಿತರಿಸಲಾಗುತ್ತಿದೆ. ಭಕ್ತರು ಸಹ ಭಕ್ತಿಭಾವದಿಂದ ದೇವರಿಗೆ  ಅರ್ಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ದೊಡ್ಡ ಪೆಟ್ಟಾಗಿದೆ.

ಎಂದು ತೆಲಂಗಾಣಾ ಶಾಸಕ ಟಿ. ರಾಜಾಸಿಂಹ ಅಭಿಪ್ರಾಯ ಪಟ್ಟರು.

ಗೋವಾದ ಪೊಂಡಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಾವೇಶ ಪ್ರಯುಕ್ತ ಪಣಜಿಯಲ್ಲಿನ ಝೆಟ್ ಸ್ಕ್ವೆರ್ ಬ್ಯಕ್ವೆಟ್ ಹಾಲ್ನಲ್ಲಿನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಇಂದು ಅನೇಕ ತೀರ್ಥ ಕ್ಷೇತ್ರಗಳಲ್ಲಿ ಹಿಂದುಯೇತರರು ಪ್ರಸಾದ ಮತ್ತು ಪೂಜಾ ಸಾಮಗ್ರಿಗಳ ಮಾರಾಟ ಅಂಗಡಿಗಳನ್ನು ಹೊಂದಿದ್ದಾರೆ.ಇವರ ಬಳಿ ಸಿಗುವ ಪ್ರಸಾದ ಸಾಮಗ್ರಿಗಳು ಶುದ್ಧ ಮತ್ತು ಪವಿತ್ರವಾಗಿ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹೊರಗಿನಿಂದ ಬರುವ ಭಕ್ತರಿಗೆ ಶುದ್ಧ ಪ್ರಸಾದ ಸಿಗಬೇಕಾದರೆ ಹಿಂದು ಅಂಗಡಿಕಾರರಿಗೆ ಪ್ರಸಾದ ಶುದ್ಧಿಗಾಗಿ ಓಂ ಪ್ರಮಾಣ ಪತ್ರವನ್ನು ವಿತರಿಸಲು ತಿರ್ಮಾನಿಸಲಾಗಿದೆ. ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಲಾಗುತ್ತಿದ್ದು, ದೇಶದಾದ್ಯಂತ ದೇವಸ್ಥಾನಗಳ ಪರಿಸರದಲ್ಲಿನ ಹಿಂದು ಅಂಗಡಿಕಾರರು ಓಂ ಪ್ರಮಾಣ ಪತ್ರವನ್ನು ಖಡ್ಡಾಯವಾಗಿ ಪಡೆಯಬೇಕು ಎಂದು ವಿನಂತಿಸಿದರು.

ರಮೇಶ ಶಿಂದೆ ಮಾತನಾಡಿ ಮುಸಲ್ಮಾನ ರ ಒತ್ತಡದಿಂದ ದೇಶದಲ್ಲಿ ಹಲಾಲ್ ಸರ್ಟಿಫಿಕೆಟ್ ಅನ್ನು ಎಲ್ಲ ಉತ್ಪಾದನೆಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಿಂದೂಗಳಿಗೂ ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಪಡೆದುಕೊಳ್ಳಬೇಕಾಗುತ್ತಿದೆ. ತಮಿಳುನಾಡಿನ ದೇವಸ್ಥಾನಗಳಲ್ಲಿ ಹಲಾಲ್ ಪ್ರಮಾಣಿತ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.ಇದು ಹಿಂದೂಗಳ ಧಾರ್ಮಿಕ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವರಿಗೆ ಅರ್ಪಿಸುವ ಪ್ರಸಾದವು ಶುದ್ಧ ಮತ್ತು ಸಾತ್ತ್ವಿಕವಾಗಿರಬೇಕು. ಇದು ಧರ್ಮಾಚರಣೆ ಮಾಡುವ ಹಿಂದೂಗಳ ಹಕ್ಕು. ಹಿಂದೂಗಳಿಗೆ ಶುದ್ಧ ಮತ್ತು ಉತ್ತಮ ಗುಣಮಟ್ಟದ ಪ್ರಸಾದ ದೊರೆಯಲು ಸ್ವಾತಂತ್ರ್ಯವೀರ ಸಾವರ್‌ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ರಣಜೀತ ಸಾವರಕರ್ ಇವರ ಓಂ ಪ್ರತಿಷ್ಠಾನದ ವತಿಯಿಂದ ಓಂ ಪ್ರಮಾಣಪತ್ರ ಬಿಡುಗಡೆಯಾಗಿದೆ.ಅಲ್ಲದೆ, ಮಹಾರಾಷ್ಟ್ರದ ತ್ರ್ಯಂಬಕೇಶ್ವರದಲ್ಲಿನ ದೇವಸ್ಥಾನಗಳ ಪರಿಸರದಲ್ಲಿ 100 ಪ್ರಸಾದ ಮಾರಾಟಗಾರರಿಗೆ ಓಂ ಸರ್ಟಿಫಿಕೆಟ್ ನೀಡಲಾಗಿದೆ. ಹಾಗೆಯೇ ಈ ಪ್ರಮಾಣಪತ್ರವನ್ನು ದೇಶದಾದ್ಯಂತ ದೇವಸ್ಥಾನಗಳ ಪರಿಸರದಲ್ಲಿನ ಅಂಗಡಿಕಾರರಿಗೆ ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಜೈನ್ ಮಾತನಾಡಿ ಹಿಂದೂಗಳ ಅನೇಕ ಪ್ರಾಚೀನ ದೇವಸ್ಥಾನಗಳು ಭಾರತೀಯ ಪುರಾತತ್ತ್ವ ಇಲಾಖೆ ನಿಯಂತ್ರಣದಲ್ಲಿವೆ. ಆದರೆ,ಪುರಾತತ್ತ್ವ ಇಲಾಖೆಯಿಂದ ಆ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಕೊನೆಯ ಹಂತದಲ್ಲಿವೆ. ವಾಸ್ತವದಲ್ಲಿ ಈ ದೇವಸ್ಥಾನಗಳು ಹಿಂದೂಗಳ ಅಮೂಲ್ಯ ಸಂಪತ್ತಾಗಿದೆ. ಕೇಂದ್ರ ಸರಕಾರವು ಅವುಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರವನ್ನು ಮಾಡಬೇಕು ತಮ್ಮ ಬೇಡಿಕೆ ವ್ಯಕ್ತಪಡಿಸಿದರು.

ದೇಶದ ವಿಭಜನೆ ನಂತರ ಭಾರತದ ಅನೇಕ ಮುಸಲ್ಮಾನರು ತಮ್ಮ ಸಾವಿರಾರು ಎಕರೆ ಭೂಮಿ ಮತ್ತು ಸಂಪತ್ತು ಬಿಟ್ಟು ಪಾಕಿಸ್ತಾನಕ್ಕೆ ಹೋದರು. ಅವರ ಈ ಸಂಪತ್ತನ್ನು ಇವ್ಹ್ಯಕ್ಯು ಪ್ರಾಪರ್ಟಿ ಆಕ್ಟ್ 1950 ಕ್ಕನುಸಾರ ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಆಗಿನ ಕಾಂಗ್ರೆಸ್ ಸರಕಾರವು ಈ ಎಲ್ಲ ಸಂಪತ್ತನ್ನು ವಕ್ಫೆ ನೀಡಿ ಅವರ ವ ಬೊರ್ಡ್ ಸ್ಥಾಪಿಸಿದ್ದು,

ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದರು.

ವಕ್ಫ ಬೊರ್ಡ ಪ್ರಸ್ತುತ ಭೂಮತಿಯನ್ನು ಸರಕಾರ ಮತ್ತು ಖಾಸಗಿ ಜನರಿಗೆ ಬಾಡಿಗೆಯ ಕರಾರಿನ ಮೇಲೆ ನೀಡಿ ಕೋಟ್ಯಾಂತರ ರೂಪಾಯಿಗಳನ್ನು ಗಳಿಸುತ್ತಿದೆ. ಸರಕಾರದ ಜಾಗವನ್ನು ಪಡೆದು ಅದೇ ಜಾಗಕ್ಕಾಗಿ ಸರಕಾರದಿಂದ ಬಾಡಿಗೆ ಪಡೆಯುವುದು ಇದು ಕಾನೂನುಬಾಹೀರವಾಗಿದ್ದು, ಈ ವಕ್ಫ ಬೋರ್ಡ್ ವಿಸರ್ಜಿಸಬೇಕು ಎಂದು ಆಗ್ರಹಿಸಿದರು.

ಗೋಮಂತಕ ಮಂದಿರ ಮಹಾಸಂಘದ ಜಯೇಶ ಥಳಿ ಮಾತನಾಡಿ ನಾವು ಮಂದಿರ ಮಹಾಸಂಘದ ವತಿಯಿಂದ ಗೋವಾದ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಫಾಸ್ಟಫುಡ್ ಮತ್ತು ಪ್ಲಾಸ್ಟಿಕ್ ಚೀಲಗಳ ವಿರುದ್ಧ ಅಭಿಯಾನವನ್ನು ನಡೆಸಿದ್ದೇವೆ. ಸದ್ಯ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗ ಗೋವಾದಲ್ಲಿನ ಎಲ್ಲ ಮಂದಿರಗಳ ಪರಿಸರದಲ್ಲಿ ಹಿಂದು ಅಂಗಡಿಕಾರರಿಗೆ ಓಂ ಸರ್ಟಿಫಿಕೆಟ್ ವಿತರಣೆ ಆರಂಭಿಸಿದ್ದು,ಇಲ್ಲಿಗೆ ಬರುವ ಭಕ್ತರಿಗೆ ಶುದ್ಧ ಸಾತ್ತ್ವಿಕ ಪ್ರಸಾದ ದೊರೆಯಲಿದೆ ಎಂದರು.