ಬೆಂಗಳೂರು: ಬಿಗ್ಬಾಸ್ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದ್ದು, ಸ್ಪರ್ಧಿಗಳು ತಮ್ಮ ಆಟವನ್ನು ಶುರು ಮಾಡಿದ್ದಾರೆ. ಬಿಗ್ಬಾಸ್ ಪ್ರಾರಂಭವಾಗಿ ಎರಡೆ ದಿನಕ್ಕೆ ದೊಡ್ಡಮನೆಯಲ್ಲಿ ಜಗಳ, ತಮಾಷೆ, ಟಾಸ್ಕ್, ಎಲಿಮಿನೇಷನ್ಗೆ ನಾಮೀನೆಟ್ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಮಧ್ಯೆ ದೊಡ್ಡಮನೆಗೆ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ.
ದೊಡ್ಮನೆಗೆ ಮತ್ತೊಂದು ಸಲ ಒಳ್ಳೆಯ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಈ ಫ್ರೋಮೋವನ್ನು ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿದ್ದ ಪ್ರಥಮ್ ಟ್ರೋಫಿ ಗೆದ್ದು ಕೊಂಡಿದ್ದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸಿದಂತಿದೆ.
ದೊಡ್ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂಟ್ರಿ ಕೊಡುತ್ತಾರೆ. ಇದನ್ನು ನೋಡಿದ ಸ್ಪರ್ಧಿಗಳಿಗೆ ಏನಾಗುತ್ತಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಆಗ ಗನ್ ಮ್ಯಾನ್‌ಗಳ ಜತೆ ಎಂಟ್ರಿ ಕೊಟ್ಟಿದ್ದೆ ಒಳ್ಳೆಯ ಹುಡುಗ ಪ್ರಥಮ್. ಮನೆಗೆ ಬರುತ್ತಿದ್ದಂತೆ ಪ್ರಥಮ್ ತಮ್ಮ ಗತ್ತು ತೋರಿಸಲು ಪ್ರಾರಂಭಿಸುತ್ತಾರೆ.
ಬಿಗ್ಬಾಸ್ ಸ್ಪರ್ಧಿಗಳು ಪ್ರಥಮ್ ಅವರನ್ನು ಸ್ವಾಗತಿಸಲು ಮುಂದಾಗುತ್ತಾರೆ. ಆಗ ಪ್ರಥಮ್ ನಾನು ನಿಮ್ಮ ಜತೆಗೆ ಗೇಮ್ ಆಡಲು ಬಂದಿಲ್ಲ. ನಾನು ನಿಮಗೆ ಟಾಸ್ಕ್ ಮಾಡಿಸಲು ಬಂದಿದ್ದೇನೆ ಸೈಡ್ಗೆ ಬನ್ನಿ...ಎನ್ನುತ್ತಾರೆ. ನ್ಯಾಯ ಎಂದರೆ ಲಾರ್ಡ್ ಪ್ರಥಮ್ ಸರ್.. ಪ್ರಥಮ್ ಸರ್ ಎಂದರೆ ನ್ಯಾಯಾ ಎಂದು ಜೋರಾಗಿ ಸ್ಪರ್ಧಿಗಳು ಹೇಳಿದ್ದಾರೆ. ಎಲ್ಲರೂ ತಲೆ ಬಗ್ಗಿಸಿ.. ಈ ಗುರಾಯಿಸುವುದೆಲ್ಲಾ ಬೇಡಾ...ಜೋರಾಗಿ ಚಪ್ಪಾಳಿ ತಟ್ಟಿ ಎಂದು ಪ್ರಥಮ್ ಆರ್ಡರ್ ಮಾಡುತ್ತಾರೆ. ಈ ಚಪ್ಪಾಳೆ ಯಾಕೆ ಅಂದರೆ ನಾನು ಬಿಗ್ಬಾಸ್ ಮನೆಗೆ ಬಂದಿದ್ದೇನೆ ಹೀಗಾಗಿ ಈ ಚಪ್ಪಾಳೆ ಎಂದು ಗತ್ತಿನಿಂದ ಹೇಳುತ್ತಾರೆ.
ಬಿಗ್ಬಾಸ್ ಮನೆಗೆ ಪ್ರಥಮ್ ಎಂಟ್ರಿ ಸಖತ್ ಮಜಾ ಕೋಡುವುದೇನೋ ಪಕ್ಕಾ.. ಆದರೆ ಅಲ್ಲಿರುವ ಸ್ಪರ್ಧಿಗಳಿಗೆ ಕೊಂಚ ಭಯ, ಕಿರಿಕಿರಿ ಉಂಟಾಗಿದ್ಯಾ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.
ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಆದರೆ ಇಂದು ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಪ್ರಥಮ್ ಎಂಟ್ರಿ ವೀಕ್ಷಕರಿಗೆ ಸಖತ್ ಮಜಾ ಕೊಡುವುದು ಪಕ್ಕಾ.