ನ್ಯೂಸ್

ಅಯ್ಯೋ ದುರ್ವಿಧಿಯೇ.. ಹುಟ್ಟು ಹಬ್ಬದಂದೇ ಯುವಕ ದುರ್ಮರಣ! | Tragedy

Tragedy: ಮನೆಯಲ್ಲಿ ತಾಯಿಯೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾ ಪಟ್ಟಣದಲ್ಲಿ ಮಂಗಳವಾರ(ಆ.19) ನಡೆದಿದೆ.

ತಂಗಲ್ಲಪಲ್ಲಿ ನಿವಾಸಿ ಲಕ್ಷ್ಮೀ ನಾರಾಯಣ ಅಲಿಯಾಸ್​ ಲಕ್ಕಿ(20) ಮೃತ. ಲಕ್ಕಿ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದು, ಗಣೇಶ ಹಬ್ಬ ಹಿನ್ನೆಲೆ ಇತ್ತೀಚಿಗೆ ಊರಿಗೆ ಬಂದಿದ್ದನು.

ಗಣೇಶ ಮೂರ್ತಿಯನ್ನು ತರಲು ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಆರ್ಮೂರ್‌ಗೆ ಹೋಗಿದ್ದರು. ಮಂಗಳವಾರ ಲಕ್ಕಿ ಹುಟ್ಟು ಹಬ್ಬ ಆಗಿದ್ದರಿಂದ ಗಣೇಶ ಮೂರ್ತಿ ತರುವ ಮೂಲಕ ಜನ್ಮದಿನ ಆಚರಿಸಲು ನಿರ್ಧರಿಸಿದರು.

ಬೆಳ್ಳಂ ಬೆಳಗ್ಗೆ ಗಣೇಶ ಮೂರ್ತಿ ತರುವಾಗ ಅರೆಪಲ್ಲಿ ಗ್ರಾಮದ ಬಳಿ, ಗಣೇಶ ಮೂರ್ತಿಗಿದ್ದ ಕಬ್ಬಿಣದ ರಾಡ್​ ವಿದ್ಯುತ್​ ತಂತಿಗೆ ತಗುಲಿದೆ. ಇದರಿಂದ ಲಕ್ಕಿಗೆ ಕೂಡ ವಿದ್ಯುತ್​ ಪ್ರವಹಿಸಿದೆ. ಏಕಾಏಕಿ ಬಿದ್ದ ಲಕ್ಕಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯ ಮಾರ್ಗ ಮಧ್ಯಯೇ ಲಕ್ಕಿ ಕೊನೆಯುಸಿರೆಳಿದ್ದಾನೆ.(ಏಜೆನ್ಸೀಸ್​)