ನ್ಯೂಸ್

ಅಯ್ಯೋ... ಮಕ್ಕಳ ಎದುರೇ ಎಂಥ ದುರಂತ!: ಕ್ಷಣಾರ್ಧದಲ್ಲಿ ತಾಯಿಗೆ ಆಗಿದ್ದೇನು..? | Tragedy

Tragedy: ಮಕ್ಕಳ ಎದುರೇ ಆಕಸ್ಮಿಕವಾಗಿ ರೈಲು ಬೋಗಿಯಿಂದ ಬಿದ್ದ ತಾಯಿ ಕ್ಷಣಾರ್ಧದಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್​ನ ಘಾಟೆಸ್ಕರ್​ ರೈಲು ನಿಲ್ದಾಣದಲ್ಲಿ ಭಾನುವಾರ ನಡೆದಿದೆ.

ಆಂಧ್ರದ ಅನಕಪಲ್ಲಿ ಜಿಲ್ಲೆಯ ದೊಂಡಪುಡಿ ಗ್ರಾಮದ ನಿವಾಸಿ ಶ್ವೇತಾ(33) ಮೃತೆ. ಖಾಸಗಿ ಉದ್ಯೋಗದಲ್ಲಿರುವ ವೆಂಕಟೇಶ್, ಪತ್ನಿ ಶ್ವೇತಾ ಮತ್ತು ಇಬ್ಬರು ಮಕ್ಕಳೊಂದಿಗೆ ಲಿಂಗಂಪಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಶ್ವೇತಾ ತನ್ನ ಇಬ್ಬರು ಮಕ್ಕಳೊಂದಿಗೆ ದೊಂಡಪುಡಿ ಗ್ರಾಮಕ್ಕೆ ಹೊಗುತ್ತಿರುವಾಗ ಈ ಘಟನೆ ಸಂಭವಿಸಿದೆ.

ಘಟನೆ ನಡೆದಿದ್ದೇಗೆ..?

ಟಿಕೆಟ್​ ತೆಗೆಸಲು ಲೇಟ್​ ಆದ ಕಾರಣ ಆತುರದಿಂದ ಮಕ್ಕಳನ್ನು ಮತ್ತು ಬ್ಯಾಗ್​ ಹಿಡಿದುಕೊಂಡು ರೈಲಿನಲ್ಲಿ ಹತ್ತಲು ಪ್ರಾರಂಭಿಸಿದಳು. ರೈಲು ಚಲಿಸುವ ವೇಗವನ್ನು ಪಡೆದಿದೆ. ಪರಿಣಾಮವಾಗಿ, ಶ್ವೇತಾ ಜಾರಿ ಬಿದ್ದು, ಬೋಗಿಯ ಪ್ಲಾಟ್‌ಫಾರ್ಮ್‌ನ ಮಧ್ಯದಲ್ಲಿ ಸಿಲುಕಿಕೊಂಡು ಹಳಿಗಳ ಪಕ್ಕದಲ್ಲಿ ಬಿದ್ದಿದ್ದಾಳೆ. ರೈಲಿನ ಗಾಲಿಗಳು ಆಕೆಯ ಮೇಲೆರಿದ ಪರಿಣಾಮ ಪ್ರಾಣಪಕ್ಷಿ ಹಾರಿಹೋಗಿದೆ. ಅಪಘಾತವನ್ನು ಗಮನಿಸಿದ ಪ್ರಯಾಣಿಕರು ಮತ್ತು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ, ಆಕೆ ಆಗಲೇ ಮೃತ ಆಗಿದ್ದಾಳೆ ಎಂದಿದ್ದಾರೆ. ಮಾಹಿತಿ ತಿಳಿದ ಕೂಡಲೇ ಆಕೆಯ ಪತಿ ವೆಂಕಟೇಶ್ ಸ್ಥಳಕ್ಕೆ ತಲುಪಿ ಕಣ್ಣೀರಿಟ್ಟಿದ್ದಾರೆ.(ಏಜೆನ್ಸೀಸ್​)