ಹೈದರಾಬಾದ್: ಇಂದು (ಸೆ.22) ನಟ ಪವನ್ ಕಲ್ಯಾಣ್ ಹಾಗೂ ಇಮ್ರಾನ್ ಹಶ್ಮಿ ನಟನೆಯ 'ಒಜಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಂಡಿದೆ. ಮಾಸ್ ಡ್ರಾಮಾ ಚಿತ್ರವಾದ 'ದೆ ಕಾಲ್ ಹಿಮ್ ಒಜಿ' ಟೈಟಲ್ ಬಿಡುಗಡೆಯಾದಾಗಿನಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಹಾಗಾಗಿ ಚಿತ್ರತಂಡ ಇಂದು ಅಧಿಕೃತವಾಗಿ ಟ್ರೈಲರ್ ಲಾಂಚ್ ಮಾಡಿದೆ.
ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿಯಂತಹ ತಾರಾಬಳಗ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸುಜೀತ್ ನಿರ್ದೇಶನದ ಈ ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ನಿರ್ಮಿಸಿದ್ದಾರೆ.
(ಏಜೆನ್ಸೀಸ್)
ಇನ್ನೂ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ತೆರೆಕಂಡ ಕೆಲವೇ ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆ್ಯಕ್ಷನ್ ಲುಕ್ನಲ್ಲಿ ಪವನ್ ನಟಿಸಿದ್ದು, ಮಾಸ್ ದೃಶ್ಯಗಳು ದೂಳ್ ಎಬ್ಬಿಸಿವೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಲ್ಲಿ ಈ ಟ್ರೇಲರ್ ಅಭಿಮಾನಿಗಳನ್ನು ಗೆದ್ದಿದೆ.
ಈ ಸಿನಿಮಾ ಇದೇ ಸೆಪ್ಟೆಂಬರ್ 25 ರಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ತೆಲಂಗಾಣವು ಸೆಪ್ಟೆಂಬರ್ 24 ರಂದು ರಾತ್ರಿ 9 ಗಂಟೆಗೆ ಪ್ರೀಮಿಯರ್‌ಗಳನ್ನು ಆಯೋಜಿಸಲಿದ್ದು, ಟಿಕೆಟ್ ಬೆಲೆಯನ್ನು ರೂ 800 ಎಂದು ನಿಗದಿಪಡಿಸಲಾಗಿದೆ.