ಬೆಂಗಳೂರು: ನಗರದ ಅಪಾಟ್‌ಮೆಂಟ್‌ನಲ್ಲಿ ಬಾಲಕಿಯನ್ನು ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಪ್ರಕರಣವನ್ನು ಭೇದಿಸಿರುವ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘವು ಆಕೆಯನ್ನು ಪತ್ತೆಹಚ್ಚಿ ಬಾಲಮಂದಿರಲ್ಲಿ ಪುನರ್ನಸತಿ ಕಲ್ಪಿಸಿದೆ.
ಉತ್ತರಹಳ್ಳಿಯ ಚಿಕ್ಕಲಸಂದ್ರದಲ್ಲಿರುವ ಸಾಯಿ ಶಕ್ತಿ ಅಪಾಟ್‌ಮೆಂಟ್‌ನ ್ಲ್ಯಾಟ್ ಒಂದರಲ್ಲಿ ಸುಮಾರು ಒಂಬತ್ತು ವರ್ಷದ ಬಿಹಾರ ಮೂಲದ ಬಾಲಕಿಯನ್ನು ಮನೆಗೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಿಶೋರಿಯನ್ನು ಬಾಲಕಿಯರ ಬಾಲಮಂದಿರಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಜತೆಗೆ ಕಾನೂನೂಬಾಹಿರವಾಗಿ ನಿಯೋಜಿಸಿಕೊಂಡಿದ್ದ ಮಾಲೀಕರ ವಿರುದ್ಧ ಬಾಲ್ಯವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನಗರ ಜಿಲ್ಲೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎನ್.ವಿ. ಗೋಂವಿದರಾಜು, ರವಿಕುಮಾರ್, ಸುರೇಶ್, ವಿಜಯ ಕುಮಾರ್ ಹಾಗೂ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.