ನ್ಯೂಸ್

ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ: ಒಳ ಮೀಸಲಾತಿ ಜಾರಿಗೆ ಓಕೆ ಎಂದ ಸರ್ಕಾರ: ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ?

ರಾಜ್ಯದಲ್ಲಿ ಬಹುದಿನಗಳಿಂದ ಭಾರೀ ಬೇಡಿಕೆಯಾಗಿದ್ದ ದಲಿತ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕೆಂಬ ಕೂಗನ್ನು ಸರ್ಕಾರ ಇದೀಗ ಈಡೇರಿಸಿದೆ.

ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಮತಹತ್ವದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ನೀಡಿದ್ದ ವರದಿ ಸ್ವೀಕರಿಸಿ ಚರ್ಚೆಗಿಟ್ಟ ಬೆನ್ನಲ್ಲಿಯೇ ತೀವ್ರ ಪರ-ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಇಂದು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಿದ ಸಿಎಂ ಸಿದ್ದರಾಮಯ್ಯ ಎಡಗೈ, ಬಲಗೈ ಸಮುದಾಯಕ್ಕೆ ಸಮಾನವಾಗಿ ಶೇ.6 ಮೀಸಲಾತಿ ನೀಡಿದ್ದಾರೆ.

ಎಷ್ಟೆಷ್ಟು ಮೀಸಲಾತಿ?

ಎಡಗೈಗೆ 6%, ಬಲಗೈಗೆ 6%, ಲಂಬಾಣಿ, ಭೋವಿ ಕೊರಚ ಕೊರಮ, ಅಲೆಮಾರಿ ಸೇರಿದಂತೆ ಇತರೆ ಉಪಪಂಗಡಗಳಿಗೆ 5% ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಯ ಶೇ.17 ಮೀಸಲಾತಿಯನ್ನು ಸಮಾನಾವಾಗಿ ಹಂಚಿಕೆ ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಸಮುದಾಯದ ನಾಯಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಅಸಮಾಧಾನ

ಸಿದ್ದರಾಮಯ್ಯನವರ ನಿರ್ಧಾರವನ್ನು ಕರಲವರು ಸ್ವಾಗತ ಮಾಡಿದ್ದಾರೆ. ಆದ್ರೆ, ಇತರೆ ಸಮುದಾಯ ಜೊತೆ ಅಲೆಮಾರಿಗಳನ್ನ ಸೇರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇತರೆ ಸಮುದಾಯ ಜೊತೆ ಸೇರಿಸಿ ನಮ್ಮನ್ನ ಬೀದಿಗೆ ತಂದಿದ್ದಾರೆ ಎಂದು ಅಲೆಮಾರಿ ಸಮುದಾಯ ಆಕ್ರೋಶಗೊಂಡಿದೆ.