ನ್ಯೂಸ್

VIDEO | ಒಡಿಶಾ ರೈಲು ಅಪಘಾತ; ದುರಂತದಲ್ಲಿ ಮಡಿದವರ ಮೋಕ್ಷ ಪ್ರಾಪ್ತಿಗೆ ಸಾಮೂಹಿಕ ಕೇಶ ಮುಂಡನ!

ಒಡಿಶಾ: ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 288 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮಡಿದವರಿಗೆ ಮೋಕ್ಷ ಪ್ರಾಪ್ತಿಯಾಗಲೆಂದು ಬಹನಾಗಾ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತರು ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಇರಿಸಲಾಗಿದ್ದ ಬಹನಾಗಾ ಪ್ರೌಢಶಾಲೆಯ ಆವರಣದ ಬಳಿ ಮೂರು ದಿನಗಳ ಕಾಲ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಆಧ್ಯಾತ್ಮಿಕ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಅಂತೆಯೇ ಹತ್ತನೇ ದಿನದ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ.

11ನೇ ದಿನವಾದ ನಾಳೆ ಬಿಸ್ವ ಶಾಂತಿ ಮಹಾ ಯಜ್ಞ, ನಾಮ ಸಂಕೀರ್ತನೆ, ಅಖಂಡ ಗಾಯತ್ರಿ ಮಂತ್ರ ಪಠಣ ನಡೆಯಲಿದ್ದು, ಮಂಗಳವಾರ ಸತ್ಸಂಗ ಹಾಗೂ ಕ್ಯಾಂಡಲ್ ಲೈಟ್ ಮಾರ್ಚ್ ಏರ್ಪಡಿಸಲಾಗಿದೆ ಎಂದು ಸಂಘಟನಾ ಸಮಿತಿ ಸದಸ್ಯ ಜಯಕ್ರುಷ್ಣ ಸಾರಂಡಿ ತಿಳಿಸಿರುವುದು ವರದಿಯಾಗಿದೆ.