ನ್ಯೂಸ್

ಒಡಿಶಾ ರೈಲು ದುರಂತ; ಸಂತ್ರಸ್ತರ ಸಂಬಂಧಿಕರಿಗಾಗಿ ಇಲ್ಲಿವೆ ಸಹಾಯವಾಣಿ ಸಂಖ್ಯೆಗಳು

ನವದೆಹಲಿ: ಒಡಿಶಾದಲ್ಲಿ ಸಂಭವಿಸಿರುವ ರೈಲು ದುರಂತದಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಸಂತ್ರಸ್ತರ ಸಂಬಂಧಿಕರು ಮತ್ತು ಪರಿಚಿತರಿಗೆ ಅಗತ್ಯ ಮಾಹಿತಿ ನೀಡುವುದಕ್ಕಾಗಿ ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಿದೆ. ಆ ಸಂಖ್ಯೆಗಳು ಇಂತಿವೆ.

ಬೆಂಗಳೂರು- 080 22356409
ಬಂಗಾರಪೇಟೆ - 0851 255253
ಕುಪ್ಪಂ- 84314 03419
ಎಸ್‌ಎಂವಿಬಿ- 09606005129
ಕೆಜೆಎಂ- 88612 03980

ಶಾಲಿಮಾರ್-ಚೆನ್ನೈ ಕೊರೊಮಂಡಲ್ ಎಕ್ಸ್‌ಪ್ರೆಸ್ ರೈಲುಗಾಡಿಯ 10-12 ಕೋಚ್‌ಗಳು ಬಾಲೇಶ್ವರ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಪಕ್ಕದ ಇನ್ನೊಂದು ಹಳಿ ಮೇಲೆ ಬಿದ್ದು ಈ ಅಪಘಾತ ಸಂಭವಿಸಿದೆ. ಕೆಲ ಸಮಯದ ನಂತರ ಆ ಹಳಿಯ ಮೇಲೆ ಬಂದ ಯಶವಂತಪುರ- ಹೌರಾ ರೈಲು ಈ ಮೊದಲೇ ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯಶವಂತಪುರ- ಹೌರಾ ರೈಲಿನ 3-4 ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೆ ಇಲಾಖೆಯ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.