ನ್ಯೂಸ್

ಮದ್ವೆ ಪ್ರಸ್ತಾವನೆ ಬೆನ್ನಲ್ಲೇ ಪ್ರಿಯಕರ ಕಳುಹಿಸಿದ ವಾಟ್ಸ್​ಆ್ಯಪ್​ ಸಂದೇಶ ನೋಡಿ​ ಬೆಚ್ಚಿಬಿದ್ದ ಮಾಜಿ ಪ್ರೇಯಸಿ!

ಜಾಜ್ಪುರ್​: ವಾಟ್ಸ್​ಆ್ಯಪ್​ನಲ್ಲಿ ಮಾಜಿ ಪ್ರೇಯಸಿಯ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟ ಆರೋಪದಲ್ಲಿ ಒಡಿಶಾದ ಜಾಜ್ಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಪ್ರಭಾತ್​ ನಾಯಕ್​ (32) ಎಂದು ಗುರುತಿಸಲಾಗಿದೆ. ಈತ ಜಾಜ್ಪುರ ಸರ್ದಾರ್​ ಪೊಲೀಸ್​ ಠಾಣಾ ವ್ಯಾಪ್ತಿಯ ಖೈರಾಬಾದ್​ ಗ್ರಾಮದ ನಿವಾಸಿ.

ಪೊಲೀಸ್​ ಮೂಲಗಳ ಪ್ರಕಾರ ಪ್ರಭಾತ್​​ ಆರು ವರ್ಷದ ಹಿಂದೆ ಯುವತಿಯೊಬ್ಬಳ ಜತೆ ಸಂಬಂಧ ಹೊಂದಿದ್ದನು. ಆ ಸಂದರ್ಭದಲ್ಲಿ ಇಬ್ಬರು ಕೂಡ ಜಿಲ್ಲೆಯ ಪನಿಕೋಳಿಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಯುವತಿಯ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದ.

ಇಬ್ಬರ ನಡುವಿನ ಸಂಬಂಧ ಕೊನೆಯಾದ ಬಳಿಕ ಪ್ರಭಾತ್​​ ಮತ್ತೊಬ್ಬ ಯುವತಿಯನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದ. ಅದಕ್ಕೂ ಮುನ್ನ ಮದುವೆ ವಿಚಾರ ಗೊತ್ತಾಗಿ ಸಂತ್ರಸ್ತೆ ವ್ಯಕ್ತಿಯೊಬ್ಬನಿಂದ ಮದುವೆ ಪ್ರಸ್ತಾವನೆಯನ್ನು ಕಳುಹಿಸಿದ್ದಳು. ಆದರೆ, ಆರೋಪಿ ವಾಟ್ಸ್​ಆ್ಯಪ್​ ಮೂಲಕ ಯುವತಿಯ ಅಶ್ಲೀಯ ವಿಡಿಯೋವನ್ನು ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾನೆ.

ಈ ಆಧಾರದ ಮೇಲೆ ಆರೋಪಿಯ ಮೇಲೆ ದೂರು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಆತನನ್ನು ಜಾಜ್ಪುರ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)