ನ್ಯೂಸ್

ಒಡಿಶಾ ಕಲಾವಿದನ 1.13 ಮಿ.ಮೀ. ಮರದ ಚಮಚ ಗಿನ್ನೆಸ್‌ನಲ್ಲಿ ರೆಕಾರ್ಡ್! Odisha Artist

ಒಡಿಶಾ : ನಿಖರತೆ ಮತ್ತು ಸೃಜನಶೀಲತೆಯ ಗಮನಾರ್ಹ ಪ್ರದರ್ಶನದಲ್ಲಿ, ಒಡಿಶಾ ಮೂಲದ ಸೂಕ್ಷ್ಮ ಕಲಾವಿದ ಬಿಜಯ್​ ಕುಮಾರ್​ ರೆಡ್ಡಿ (Odisha Artist) ವಿಶ್ವದ ಅತ್ಯಂತ ಚಿಕ್ಕ ಮರದ ಚಮಚವನ್ನು ತಯಾರಿಸುವ ಮೂಲಕ ಹೊಸ ಗಿನ್ನಿಸ್​ ವಿಶ್ವ ದಾಖಲೆ ನಿರ್ಮಿಸಿದ್ದು, ಇದೀಗ ಆತನ ಕೃತಿಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ಗಳಿಸಿದೆ.

ಒಡಿಶಾ ಚಾಕ್ ಆರ್ಟಿಸ್ಟ್ ಎಂದೇ ಜನಪ್ರಿಯರಾಗಿರುವ ರೆಡ್ಡಿ ಅವರು ಈ ವರ್ಷದ ಜನವರಿಯಲ್ಲಿ ಒಡಿಶಾದ ಬೆರ್ಹಾಂಪುರದಲ್ಲಿ ದಾಖಲೆ ಮುರಿದ ಕಲಾಕೃತಿಯನ್ನು ರಚಿಸಿದ್ದರು. ಅವರ ಸಂಕೀರ್ಣ ಸೃಷ್ಟಿಯು 2024 ರಲ್ಲಿ ಮತ್ತೊಬ್ಬ ಭಾರತೀಯ ಕಲಾವಿದ ಡಾ. ಮನೋಜ್ ಎಂ ಅವರ 1.4 ಮಿ.ಮೀ. ದಾಖಲೆಯನ್ನು ಮೀರಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಈ 3 ರಾಶಿಯ ಮಹಿಳೆಯರು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಬಿಡುವುದಿಲ್ಲ! ನೀವು ಕೂಡ ಇದೇ ರಾಶಿನಾ? Zodiac Signs ಈ ಮೆಚ್ಚುಗೆಗೆ ಹರ್ಷ ವ್ಯಕ್ತಪಡಿಸಿ ಮಾತನಡಿದ ರೆಡ್ಡಿ, ನನಗೆ ಆಳವಾದ ಉತ್ಸಾಹ ಇರುವುದರಿಂದ ಈ ದಾಖಲೆಯನ್ನು ಪ್ರಯತ್ನಿಸಲು ಸಾಧ್ಯವಾಯಿತು. ನನ್ನ ಕೌಶಲ್ಯ ಮತ್ತು ನನ್ನ ರಾಜ್ಯ ಎರಡನ್ನೂ ಪ್ರತಿನಿಧಿಸುವ ವಿಶಿಷ್ಟವಾದದ್ದನ್ನು ಮಾಡಲು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಹಿನ್ನಲೆ

ಸೀಮೆಸುಣ್ಣದ ತುಂಡುಗಳು ಮತ್ತು ಚಿಕಣಿ ವಸ್ತುಗಳ ಮೇಲೆ ಕಲೆಯನ್ನು ಸೃಷ್ಟಿಸುವುದಕ್ಕೆ ಹೆಸರುವಾಸಿಯಾದ ಸೂಕ್ಷ್ಮ ಶಿಲ್ಪಿ ರೆಡ್ಡಿ ಅವರು ವಿಶೇಷವಾಗಿ ಸೂಕ್ಷ್ಮ ಉಪಕರಣಗಳನ್ನು ಬಳಸಿಕೊಂಡು ಭೂತಗನ್ನಡಿಯ ಅಡಿಯಲ್ಲಿ ಮರದ ಚಮಚವನ್ನು ತಯಾರಿಸಲು ಬಹಳ ದಿನಗಳನ್ನು ತೆಗೆದುಕೊಂಡಿದ್ದಾರೆ. ಈ ಕಾರ್ಯಕ್ಕೆ ಸ್ಥಿರವಾದ ಕೈಗಳು, ಅಪಾರ ತಾಳ್ಮೆ ಮತ್ತು ಅಸಾಧಾರಣ ಗಮನದ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಗಣೇಶ ಉತ್ಸವದ ಸಂದರ್ಭದಲ್ಲಿ ತಾವು ತಯಾರಿಸಿದ ಕಲಾಕೃತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ರೆಡ್ಡಿ ಅವರು ಪೋಸ್ಟ್ ಮಾಡಿದ್ದು, ಗಣೇಶ ಪೂಜೆಯ ಸಂದರ್ಭದಲ್ಲಿ ವಿಶ್ವ ಶಾಂತಿಯ ವಿಷಯದೊಂದಿಗೆ 3 ಸೆಂ.ಮೀ ಎತ್ತರದ ಗಣೇಶ ವಿಗ್ರಹವನ್ನು ರಚಿಸಲಾಗಿದೆ. ಈ ಚಿಕಣಿ ವಿಗ್ರಹವು ಎಲ್ಲರಿಗೂ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಹೊಂದಿದೆ. ಗಣೇಶ ಪೂಜೆಯ ಶುಭಾಶಯಗಳು" ಎಂದು ಬರೆದು ಪೋಸ್ಟ್​​ ಮಾಡಿದ್ದರು.

ಇದೇ ರೀತಿ ಮಲೇಷ್ಯಾದ ವ್ಯಕ್ತಿಯೊಬ್ಬ ತನ್ನ ತಾಳ್ಮೆ ಮತ್ತು ಕೃಷಿ ಕೌಶಲ್ಯದ ಅಸಾಧಾರಣ ಸಾಧನೆಯಲ್ಲಿ ವಿಶ್ವದ ಅತಿ ಉದ್ದದ ಕೊಹ್ಲ್ರಾಬಿಯನ್ನು ಬೆಳೆಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶಿಸಿದ್ದಾರೆ. ಅದು ಒಂದು ಅಪರೂಪವಾದ ತರಕಾರಿಯಾಗಿದೆ. ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಗ್ರೆಗೊರಿ ಕೆಕೆ ಚೌ 2.320 ಮೀಟರ್ (7 ಅಡಿ 7.3 ಇಂಚು) ಉದ್ದದ ಕೊಹ್ಲ್ರಾಬಿಯನ್ನು ಬೆಳೆಸುವ ಮೂಲಕ ಈ ದಾಖಲೆಯನ್ನು ಸಾಧಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. (ಏಜೆನ್ಸೀಸ್​)