ಪಾಕಿಸ್ತಾನ: ನೆರೆಯ ರಾಷ್ಟ್ರ ಪಾಕಿಸ್ತಾನದ ಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ. ಇಲ್ಲಿನ ಹಣದುಬ್ಬರ ಜನರ ಆತಂಕ ಹೆಚ್ಚು ಮಾಡಿದೆ. ಆಗಸ್ಟ್ ಆರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರಾರಂಭವಾದ ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆಗಳು ಈಗ ದೇಶಾದ್ಯಂತ ಕಾಳ್ಗಿಚ್ಚಿನಂತೆ ಹರಡಿವೆ. ಇಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ.
ಸಭೆ ಕರೆಯಲಾಗಿದೆ
ತರಾತುರಿಯಲ್ಲಿ ಹಂಗಾಮಿ ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್ ತುರ್ತು ಸಭೆ ಕರೆದಿದ್ದಾರೆ. ಅಲ್ಲದೆ 48 ಗಂಟೆಯೊಳಗೆ ದಾರಿ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೆಚ್ಚಾಯ್ತು ತೊಂದರೆ
ಪಾಕಿಸ್ತಾನದ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ದಿನವೂ ಒಂದಲ್ಲ ಒಂದು ದೇಶದ ಮುಂದೆ ಕೈ ಚಾಚಲಾಗುತ್ತಿದೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಹಣಕಾಸಿನ ನೆರವು ಪಡೆದಾಗ ಅವರ ತೊಂದರೆ ದುಪ್ಪಟಾಗಿದೆ. ವಾಸ್ತವವಾಗಿ, $3 ಶತಕೋಟಿ ಆರ್ಥಿಕ ನೆರವು ಪ್ಯಾಕೇಜ್ ಅನ್ನು ಅನುಮೋದಿಸುವಾಗ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವಿಧಿಸಿದ ಕಠಿಣ ಷರತ್ತುಗಳಿಂದಾಗಿ ಪಾಕಿಸ್ತಾನವು ಹಣದುಬ್ಬರದ ಹಿಡಿತದಲ್ಲಿದೆ.
ಮೂಲೆ ಮೂಲೆಯಲ್ಲಿ ಪ್ರತಿಭಟನೆಗಳು
ವಿದ್ಯುತ್ ಬೆಲೆ ಏರಿಕೆಯಿಂದ ಸಮಸ್ಯೆಗಳು ಹೆಚ್ಚಾಗಿದ್ದು, ಪಾಕಿಸ್ತಾನದಲ್ಲಿ ಜನರು ಬೀದಿ ಪಾಲಾಗಿದ್ದಾರೆ. ಅಂದಹಾಗೆ, ಪಾಕಿಸ್ತಾನದ ಮೂಲೆ ಮೂಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಜನರು ತಮ್ಮ ಪ್ರದೇಶದಲ್ಲಿ 4,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಆದರೆ ಇನ್ನೂ ಅವರಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಇಲ್ಲಿನ ಜನರು ವಿದ್ಯುತ್ ಕಡಿತದ ಬಗ್ಗೆಯೂ ದೂರುತ್ತಿದ್ದಾರೆ.
ಸಂಬಳಕ್ಕಿಂತಲೂ ಹೆಚ್ಚಿನ ಬಿಲ್ ಪಾವತಿ
ಪ್ರತಿಭಟನೆ ಈಗ ಕರಾಚಿಯಿಂದ ಖೈಬರ್‌ಗೆ ತಲುಪಿದೆ. ವಿದ್ಯುತ್ ಬಿಲ್‌ಗಳಿಂದ ತಮ್ಮ ಮಾಸಿಕ ಆದಾಯದ ಶೇಕಡ 20 ರಿಂದ 50 ರಷ್ಟು ಹಣ ಬರಿದಾಗುತ್ತಿದೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ. ಕರಾಚಿಯ ಜನರು ತಮ್ಮ ಸಂಬಳಕ್ಕಿಂತಲೂ ಹೆಚ್ಚಿನ ಬಿಲ್ ಪಾವತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.