ನ್ಯೂಸ್

ನಕಲಿ ದಾಖಲೆ ಸಲ್ಲಿಸಿ ಗುತ್ತಿಗೆ ಪಡೆದ!

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ರಾಜ್ಯ ಸರ್ಕಾರದ ಕಾಮಗಾರಿ ಗುತ್ತಿಗೆ ಪಡೆಯಲು 50 ಲಕ್ಷ ರೂ. ಮೌಲ್ಯದ ನಕಲಿ 13 ನಿಗದಿತ ಠೇವಣಿ ಬಾಂಡ್ (ಎಫ್ ಡಿ ಆರ್) ಸಲ್ಲಿಸಿ ವಂಚನೆಗೆ ಯತ್ನಿಸಿದ ಗುತ್ತಿಗೆದಾರರ ಕಳ್ಳಾಟ ಬಯಲಿಗೆ ಬಂದಿದ್ದು, ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪ್ರದೀಪ್ ದೇವನೂರ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಕೆ.ಆರ್. ಪುರದ ಸಂಗಮೇಶ್ ಇನ್‌ರ್ಾಸ್ಟ್ರಕ್ಚರ್ ಇಂಡಿಯಾ ಪ್ರೈ.ಲಿ. ಮತ್ತು ದೀನಬಂಧುನಗರ ನಿವಾಸಿ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ನಗರದಿಂದ ಕಾಮಗಾರಿಗಳ ಟೆಂಡರ್ ನೋಟಿಫಿಕೇಷನ್ ಕರೆಯಲಾಗಿತ್ತು. ಅದಕ್ಕೆ ಆರೋಪಿತ ಗುತ್ತಿಗೆ ಕಂಪನಿ ಅರ್ಹ ಬಿಡ್‌ದಾರರಾಗಿ 13 ಕಾಮಗಾರಿಗಳನ್ನು ಪಡೆದುಕೊಂಡಿತ್ತು. ಈ ಗುತ್ತಿಗೆ ಕಂಪನಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದ 49.36 ಲಕ್ಷ ರೂ. ಮೌಲ್ಯದ 13 ಎಫ್ ಡಿ ಆರ್ ಗಳನ್ನು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್, ವಿಚಕ್ಷಣಾ ದಳ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಕಲಿ ಎ್ಡಿಆರ್‌ಗಳು ಎಂಬುದು ಗೊತ್ತಾಗಿದೆ. ಸಂಬಂಧಪಟ್ಟ ಬ್ಯಾಂಕ್‌ಗೆ ಕಳುಹಿಸಿ ವರದಿ ಕೇಳಿದಾಗ ಇಂತಹ ಯಾವುದೇ ಎ್ಡಿಆರ್ ವಿತರಣೆ ಮಾಡಿಲ್ಲ.

ಠೇವಣಿ ರಸೀದಿ ನಕಲಿ ಎಂದು ದೃಢೀಕರಿಸಿ ವರದಿ ಸಲ್ಲಿಸಿದ್ದಾರೆ. ಆದರಿಂದ 2023 ರಿಂದ 2025ರ ಮಾರ್ಚ್‌ವರೆಗೆ ಆರೋಪಿತ ಸಂಗಮೇಶ್ ಇನ್‌ರ್ಾಸ್ಟ್ರಕ್ಚರ್ ಇಂಡಿಯಾ ಪ್ರೈ.ಲಿ. ಮತ್ತು ಸಂಗಮೇಶ್ ನಕಲಿ ಎ್ಡಿಆರ್ ಸಲ್ಲಿಸಿ ಸರ್ಕಾರದ ಕಾಮಗಾರಿ ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.