ಬೆಂಗಳೂರು: ಬ್ಲಾಕ್ ಮೇಲ್ ಮಾಡುವ ಆ ವ್ಯಕ್ತಿ (ದೇವರಾಜೇಗೌಡ) ಕುಮಾರಸ್ವಾಮಿಯವರನ್ನೂ ಭೇಟಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇವರು ಹಾಸನಾಂಬ ದೇವಸ್ಥಾನಕ್ಕೆ ಬಂದು ದೇವರ ಮೇಲೆ ಕೈಯಿಟ್ಟು ಚರ್ಚೆ ಏನು ಮಾಡಲಾಗಿದೆ ಎಂದು ಹೇಳಲಿ ಎಂದು ಸಚಿವ ಕೃಷ್ಣಬೈರೇಗೌಡ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಇವರು ಕಾನೂನಿಗಿಂತ ಮೇಲೆ ಇದ್ದಾರೆ ಎಂದು ಕಿಡಿಕಾರಿದ ಅವರು ಲೈಂಗಿಕ ದೌರ್ಜನ್ಯ ಮಾಡಿ ಎಂದು ನಾವು ಹೇಳಿದ್ದೆವಾ? ಕಿಡ್ನಾಪ್ ಮಾಡಲು ನಾವು ಹೇಳಿದ್ದೆವೆಯೇ? ಎಂದು ದಳಪತಿಗಳನ್ನು ಚಿವುಟಿದರು.