ಬೆಳವಾಗಿ: ಬಸ್ ಚಲಾಯಿಸುವಾಗಲೇ ಚಾಲಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ (41) ಮೃತ ಚಾಲಕ. ದೊಡವಾಡ ಗ್ರಾಮದ ನಿವಾಸಿಯಾಗಿದ್ದಾರೆ. ಬಸ್ ಚಲಾಯಿಸುವಾಗಲೇ ಚಾಲಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು?: ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವದತ್ತಿ ಘಟಕಕ್ಕೆ ಸೇರಿದ ಬಸ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಸ್ ಚಾಲಕ ಸವದತ್ತಿಯಿಂದ ಪುಣೆಗೆ ತೆರಳುತ್ತಿದ್ದರು. ಶನಿವಾರ ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ತೀವ್ರ ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ.
ಎದೆ ನೋವಿನಿಂದ ನರಳುತ್ತಿದ್ದ ಮೂಗಪ್ಪರನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ರಸ್ತೆ ಪಕ್ಕದ ಹೊಟೇಲ್ ಗೆ ಎತ್ತಿಕೊಂಡು ಹೋಗಿ ಉಪಚಾರ ಮಾಡಿದ್ದಾರೆ. ಬಳಿ ಬಂದ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಚಾಲಕ ಮೂಗಪ್ಪ ಶಿವಪುತ್ರಪ್ಪ ಕೊನೆಯುಸಿರು ಎಳೆದಿದ್ದಾರೆ.
ತಾನು ಸಾಯುವ ಮುನ್ನ ಬಸ್‌ನಲ್ಲಿದ್ದ ಪ್ರಯಾಣಿಕರ ಜೀವ ಉಳಿಸಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.