ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ನಗರಸಭೆ ಸದಸ್ಯ ಮುನೀರ್ ಅಹ್ಮದ್, ಎಸ್.ಮಂಜುಳಾ, ಖಲಂದರ್, ದಿವ್ಯಾ ಇದ್ದರು. 
ನ್ಯೂಸ್

ಮಕ್ಕಳ ದೈಹಿಕ ಕ್ಷಮತೆ, ಕ್ರಿಯಶೀಲತೆಗೆ ಪೌಷ್ಠಿಕ ಆಹಾರ ಅಗತ್ಯ

ಚಿಕ್ಕಮಗಳೂರು: ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಶೀಲತೆಗೆ ಪೌಷ್ಠಿಕ ಆಹಾರ ಅಗತ್ಯವಾಗಿದ್ದು, ಮಕ್ಕಳು ಅಪೌಷ್ಠಿಕತೆಯಿಂದ ಬಳಲದಂತೆ ಆಹಾರ ನೀಡುವ ಜತೆಗೆ ಅದರ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ನಗರಸಭೆ ಸದಸ್ಯ ಮುನೀರ್ ಅಹ್ಮದ್ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ತರಕಾರಿಗಳನ್ನು ತೆಗೆದಿಟ್ಟು ಊಟ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ರಾಗಿ, ನವಣೆ ಸೇರಿದಂತೆ ಮೊದಲಾದ ಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ. ಮಕ್ಕಳು ಹಸಿವಿನಿಂದ ಬಳಲಬಾರದು. ಪೌಷ್ಠಿಕಾಂಶ ಆಹಾರ ಸೇವಿಸುವ ಮೂಲಕ ಸದೃಢ ಆರೋಗ್ಯ ಹೊಂದಬೇಕು ಎಂದು ಹೇಳಿದರು.
ಪೋಷಣ್ ಅಭಿಯಾನದ ಮೇಲ್ವಿಚಾರಕಿ ಎಸ್.ಮಂಜುಳಾ, ನಗರಸಭೆ ಸದಸ್ಯ ಖಲಂದರ್, ಪೋಷಣ್ ಅಭಿಯಾನದ ಸಂಯೋಜಕಿ ದಿವ್ಯಾ, ಹಿರಿಯ ಮೇಲ್ವಿಚಾಕಿ ಪುಷ್ಪಾವತಿ ಬಿರಾದರ್ ಮತ್ತಿತರರಿದ್ದರು.