ಹಳೇ ಸೊರಬ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮವನ್ನು ಬಿಇಒ ಪುಷ್ಪಾ ಉದ್ಘಾಟಿಸಿದರು. ಡಾ. ಕೆ.ಸಿ.ಶ್ರೀಕಾಂತ್, ಪ್ರಭಾಕರ್, ಮಂಜುನಾಥ್, ಗಣಪತಿ ಇತರರಿದ್ದರು. 
ನ್ಯೂಸ್

ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಅವಶ್ಯ

ಸೋಮಶೇಖರ ಎನ್

ಸೊರಬ: ಸದೃಢ ದೇಹದಲ್ಲಿ ಸದೃಢ ಮನಸ್ಸು ಸೃಷ್ಟಿಯಾಗಲು ಅಗತ್ಯ ಪೋಷಕಾಂಶ ಸಹಕಾರಿ. ಬೆಳೆಯುವ ಮಕ್ಕಳಿಗೆ ಇದು ತುಂಬ ಅವಶ್ಯಕ ಎಂದು ಬಿಇಒ ಆರ್.ಪುಷ್ಪಾ ಹೇಳಿದರು.

ಶಿಕ್ಷಣ ಇಲಾಖೆಯಡಿ ಅಕ್ಷರ ದಾಸೋಹ ಯೋಜನೆಯಡಿ ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಸಹಭಾಗಿತ್ವದಲ್ಲಿ ಹಳೇ ಸೊರಬ ಶಾಸಕರ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕತೆ ವೃದ್ಧಿಸುವ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರದೆ ಹಿಂದುಳಿಯಲು ಅಪೌಷ್ಟಿಕತೆಯೂ ಒಂದು ಕಾರಣ. ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಶಾಲೆಗಳಲ್ಲಿ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಶಿಕ್ಷಣ ಇಲಾಖೆ ಜತೆ ಅಜೀಮ್ ಪ್ರೇಮ್‌ಜೀ ಸಂಸ್ಥೆಯವರು ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ವಿತರಣೆಗೆ ಮುಂದಾಗಿರುವುದು ಉತ್ತಮ ಯೋಜನೆ ಎಂದು ತಿಳಿಸಿದರು.

ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಕೆ.ಸಿ.ಶ್ರೀಕಾಂತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್, ನೌಕರರ ತಾಲೂಕು ಸಂಘದ ಅಧ್ಯಕ್ಷ ಮಂಜುನಾಥ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಓಂಕಾರಪ್ಪ, ದೈಹಿಕ ಪರಿವೀಕ್ಷಕ ಲಿಂಗರಾಜ ಒಡೆಯರ್, ಸಿ.ಪಿ.ಸದಾನಂದ, ಸಂಜಯ್, ಮುಖ್ಯಶಿಕ್ಷಕ ಗಣಪತಿ, ಎಸ್‌ಡಿಎಸಿ ಸದಸ್ಯರಾದ ಉಮೇಶ್, ಮಹೇಶ್, ವಿಜಯ, ಹೊನ್ನಮ್ಮ, ಮಹಾಲಕ್ಷ್ಮೀ, ಸಲೀಂ ಇತರರಿದ್ದರು.