ಆಯನೂರು ಕೋಟೆ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾಗಿರುವ ಅಡಕೆ ಸಸಿಗಳು. 
ನ್ಯೂಸ್

ಅಡಕೆ ಗಿಡಗಳು ಬೆಂಕಿಗಾಹುತಿ

ಶಿವಕುಮಾರ ಎಸ್.ಪಿ.

ಆಯನೂರು: ಆಯನೂರು ಕೋಟೆ ಗ್ರಾಮದ ಪರಮೇಶ್ವರಪ್ಪ ಎಂಬುವವರ ಜಮೀನಿನಲ್ಲಿ 150ಕ್ಕೂ ಹೆಚ್ಚು ಅಡಕೆ ಸಸಿಗಳು ಬೆಂಕಿಗೆ ಆಹುತಿಯಾಗಿವೆ. ತೋಟದ ಅಕ್ಕಪಕ್ಕದವರು ತಿಳಿಸಿದ್ದರಿಂದ ಜಮೀನಿಗೆ ಆಗಮಿಸಿದ ಪರಮೇಶ್ವರಪ್ಪ, ಮಗ ಸಂಜು ಹಾಗೂ ಅಕ್ಕಪಕ್ಕದ ರೈತರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ 150ಕ್ಕೂ ಹೆಚ್ಚು ಅಡಕೆ ಸಸಿ, ಹನಿ ನೀರಾವರಿಗಾಗಿ ಅಳವಡಿಸಲಾಗಿದ್ದ ಪೈಪ್‌ಲೈನ್ ಸುಟ್ಟುಹೋಗಿವೆ. ಬೆಂಕಿ ಹೇಗೆ ತಗುಲಿತು ಎಂಬುದರ ಬಗ್ಗೆ ಪರಿಶೀಲನೆ ಆರಂಭವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.