Nursery: ಖಾಸಗಿ ಶಾಲೆಯೊಂದು ತನ್ನ ಶಾಲೆಯ ಮಕ್ಕಳಿಗೆ ಶುಲ್ಕ ಪಟ್ಟಿ ಬಿಡುಗಡೆ ಮಾಡಿದ್ದು, ಒಮ್ಮೆ ಶುಲ್ಕದ ಪಟ್ಟಿ ನೋಡಿದ ಜನರು ಹೌಹಾರಿದ್ದಾರೆ.
ಹೌದು, ಶಾಲೆಯೊಂದು ನರ್ಸರಿ ಮಕ್ಕಳ 2025-26 ಶೈಕ್ಷಣಿಕ ವರ್ಷದ ಫೀಸ್ ಬರೋಬ್ಬರಿ 2,51,000 ರೂ. ಇರುವ ಪಟ್ಟಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಸಿಕೊಂಡಿದ್ದು, ಇದೀಗ ಮಕ್ಕಳ ಫೀಸ್ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದೆ.
ಇನ್ನು ವೈರಲ್ ಆದ ಪೋಟೋದಲ್ಲಿ ಶಾಲೆಯ ಹೆಸರನ್ನು ಉಲ್ಲೆಖಿಸದಿದ್ದರೂ, ಇದು ಹೈದರಾಬಾದ್ನಲ್ಲಿರುವ ಖಾಸಗಿ ಶಾಲೆಗೆ ಸೇರಿದ ವರದಿಗಳು ಉಲ್ಲೇಖಿಸಿವೆ.
ಧರ್ಮಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕಿ ಅನುರಾಧ ತಿವರಿ ತಮ್ಮ ಎಕ್ಸ್ (X) ಖಾತೆಯಲ್ಲಿ ಶುಲ್ಕದ ಸ್ಕ್ರೀನ್ಶಾಟ್ವೊಂದನ್ನು ಹಂಚಿಕೊಂಡಿದ್ದು, '' ನರ್ಸರಿ ಶುಲ್ಕ 2,51,000, ಈಗ ABCD ಕಲಿಯುವುದರಿಂದ ತಿಂಗಳಿಗೆ 21,000 ರೂ ವೆಚ್ಚವಾಗುತ್ತದೆ. ಇಷ್ಟೊಂದು ಹಾಸ್ಯಾಸ್ಪದವಾಗಿ ಶುಲ್ಕವನ್ನು ಸಮರ್ಥಿಸಲು ಶಾಲೆಗಳು ಏನು ಕಲಿಸುತ್ತಿವೆ? ಎಂದು ಅವರು ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪೋಸ್ಟ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲ ಬಳಕೆದಾರರು ಶುಲ್ಕದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಒಬ್ಬ ಬಳಕೆದಾರ ಶಿಕ್ಷಣ ಸಂಸ್ಥೆ ಒಂದು ರೀತಿಯ ವಂಚನೆಯಾಗಿ ಮಾರ್ಪಟ್ಟಿದೆ. ಕೆಲವು ವಿಷಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)