ನ್ಯೂಸ್

Uttar Pradesh | ನರ್ಸ್ ಮೇಲೆ ಅತ್ಯಾಚಾರ: ವೈದ್ಯ ಸೇರಿ ಮೂವರ ಬಂಧನ

ಲಖನೌ: ಉತ್ತರಪ್ರದೇಶದ ಮೊರಾದಾಬಾದ್​ನಲ್ಲಿ ನರ್ಸ್ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಆಸ್ಪತ್ರೆಯಲ್ಲಿ ಒತ್ತಾಯಾಳಾಗಿಟ್ಟುಕೊಂಡು ಅತ್ಯಾಚಾರವೆಸಗಿದ ಆರೋಪದ ಮೇಲೆ ವೈದ್ಯ ಹಾಗೂ ಆತನ ಇಬ್ಬರ ಸಹಚರರನ್ನು ಬಂಧಿಸಲಾಗಿದೆ.

ಆಸ್ಪತ್ರೆಗೂ ಬೀಗ ಹಾಕಲಾಗಿದೆ. ಆಕೆ ಕಳೆದ 10 ತಿಂಗಳಿನಿಂದ ನರ್ಸ್​ ಆಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ರಾತ್ರಿ ವೈದ್ಯರ ಪತ್ನಿ ಮನೆಯಲ್ಲಿರಲಿಲ್ಲ. ಆಕೆಯನ್ನು ಮಲಗುವ ರೂಂ ಕರೆದಿದ್ದರು. ಆಕೆ ನಿರಾಕರಿಸಿದಾಗ ಆತನ ಸಹಚರರು ಆಕೆಯನ್ನು ಕೊಠಡಿಗೆ ತಳ್ಳಿ ಬಾಗಿಲು ಹಾಕಿದ್ದರು, ಆ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಅಲ್ಲದೆ ಆಕೆಗೆ ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯ ಬಗ್ಗೆ ನರ್ಸ್ ತನ್ನ ಮನೆಯವರಿಗೆ ತಿಳಿಸಿದಾಗ, ಅವರು ಅವಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಇಡೀ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ವೈದ್ಯರು, ವಾರ್ಡ್ ಬಾಯ್ ಮತ್ತು ವೈದ್ಯ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಡಾ.ಶಹನವಾಜ್ ಮತ್ತು ಆತನ ಇಬ್ಬರು ಸಹ ಆರೋಪಿಗಳನ್ನು ಸ್ಥಳದಿಂದ ಬಂಧಿಸಿದ್ದಾರೆ.

ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಮತ್ತು ಎಸ್‌ಸಿ ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನರ್ಸ್ ತಂದೆಯಿಂದ ದೂರನ್ನು ಸ್ವೀಕರಿಸಿದ ಮೊರಾದಾಬಾದ್ ಪೊಲೀಸರು ಭಾರತೀಯ ನ್ಯಾಯ್ ಸಂಹಿತಾ (ಬಿಎನ್‌ಎಸ್) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನರ್ಸ್​​ನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಘಟನೆ ಕುರಿತು ಮಾತನಾಡಿದ ಮೊರಾದಾಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗ್ರಾಮಾಂತರ ಸಂದೀಪ್ ಕುಮಾರ್ ಮೀನಾ, "ಈ ವಿಷಯಕ್ಕೆ ಸಂಬಂಧಿಸಿದಂತೆ ಠಾಕುರ್ದ್ವಾರ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ತಂಡವನ್ನು ಸಹ ರಚಿಸಲಾಗಿದೆ, ಮತ್ತು ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.

ಏತನ್ಮಧ್ಯೆ, ನರ್ಸ್ ತಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದು, ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.