ನ್ಯೂಸ್

ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?

ಇಂದೋರ್​: ಪ್ರೇಮವೈಫಲ್ಯದ ನೋವಿನಿಂದ ಹೊರಬರಲು, ಪ್ರೇಮಿಯನ್ನು ಮರೆಯಲು ಭಗ್ನಪ್ರೇಮಿಗಳು ನಾನಾ ಕಸರತ್ತು ಮಾಡುತ್ತಾರೆ. ಅದೇ ಥರ ಇಲ್ಲೊಬ್ಬಳು ನರ್ಸ್​ ತನ್ನ ಪ್ರೇಮವೈಫಲ್ಯ ಮರೆಯಲು ಅರಿವಳಿಕೆ ಚುಚ್ಚಮದ್ದು ಚುಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಪೂಜಾ ಗಂಜನ್​ (27) ಅರಿವಳಿಕೆ ಚುಚ್ಚುಮದ್ದು ತೆಗೆದುಕೊಂಡ ನರ್ಸ್. ಪ್ರೇಮವೈಫಲ್ಯಕ್ಕೆ ಒಳಗಾಗಿದ್ದ ಈಕೆ ಆ ನೋವಿನಿಂದ ಹೊರಬರಲು, ಪ್ರಿಯತಮನನ್ನು ಮರೆಯಲು ಅನಸ್ತೇಷಿಯಾವನ್ನು ಓವರ್​ಡೋಸ್​ ಆಗಿ ಪಡೆದಿದ್ದಳು.

ಅನಸ್ತೇಷಿಯಾ ಪಡೆಯುವ ಮೊದಲು ಆಕೆ ಡೆತ್​ನೋಟ್ ಬರೆದಿಟ್ಟಿದ್ದು, ಆಸ್ಪತ್ರೆಯ ಸಹೋದ್ಯೋಗಿಯೊಂದಿಗೆ ಸಂಬಂಧ ಇರುವುದನ್ನು ತಿಳಿಸಿದ್ದಾಳೆ. ಆದರೆ ತಾನು ಪ್ರೀತಿಸುತ್ತಿದ್ದವ ಬೇರೆ ಮೆಡಿಕಲ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದಲ್ಲದೆ, ಇನ್ನೊಬ್ಬಳನ್ನು ಮದುವೆಯಾದ ಎಂಬುದನ್ನೂ ತಿಳಿಸಿದ್ದಾಳೆ. ತನಗೆ ಬೇರೆಯವರೊಂದಿಗೆ ಮದುವೆ ನಿಗದಿಯಾಗಿದೆ, ನಾವಿಬ್ಬರು ಮದುವೆ ಆಗಲು ಆಗುವುದಿಲ್ಲ ಎಂಬುದನ್ನು ಮೊದಲೇ ಹೇಳಿದ್ದೆ ಎಂಬುದಾಗಿ ಆರೋಪಿತ ಪ್ರಿಯಕರ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.