ಬೆಂಗಳೂರು: ಕೊರಮ, ಕೊರಚ ಸಮಾಜದ 12ನೇ ಶತಮಾನದ ಕಾಯಕಯೋಗಿ ಶ್ರೀ ಶರಣ ನುಲಿಯ ಚಂದಯ್ಯನವರ 917ನೇ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಗುರುವಾರ ಶಾಸಕರ ಭವನದಲ್ಲಿ ನಡೆಯಿತು.
ಆ.19ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆಗೊಂಡಿರುವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಚಂದ್ರಣ್ಣ ವಹಿಸಿದ್ದರು.
ಕೊರಮ- ಕೊರಚ ಸಮುದಾಯದ ಅಭಿವೃದ್ಧಿಗೆ ಆಗಬೇಕಾದ ಕಾರ್ಯಕ್ರಮಗಳು, ಜಯಂತಿ ದಿನದಂದು ನಡೆಸಬೇಕಾದ ವ್ಯವಸ್ಥೆ, ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಎಂ.ವೆಂಕಟೇಶ್ ಹಾಗೂ ಕೊರಮ- ಕೊರಚ ಸಮಾಜದ ಪ್ರಮುಖರು ತಮ್ಮ ಅಭಿಪ್ರಾಯ ಹಂಚಿಕೊಂಡರು.