ನುಗ್ಗೇಹಳ್ಳಿ: ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಂಡೆಕೇರಿ ಎನ್. ಆರ್. ಹೊನ್ನೇಗೌಡ ಯಾದವ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಎನ್.ಎಸ್. ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಹೊನ್ನೇಗೌಡ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷ ಹೊನ್ನೇಗೌಡ ಯಾದವ್ ಮಾತನಾಡಿ, ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಸಲಹೆ, ಸಹಕಾರ ಪಡೆದು ಅಬಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಜೆಡಿಎಸ್ ತಾಲೂಕು ಯುವ ಮುಖಂಡ ಸಿ.ಬಿ. ಜೈದೀಪ್ ಗೌಡ ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಉಪಾಧ್ಯಕ್ಷ ಲಕ್ಷ್ಮಣ್, ತಾಪಂ ಮಾಜಿ ಉಪಾಧ್ಯಕ್ಷರಾದ ಎಚ್.ಎಂ. ಜಯರಾಮ್, ಎಚ್.ಜೆ.ಕಿರಣ್, ತಾಪಂ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಕ್ಟರ್, ಮಾಜಿ ಅಧ್ಯಕ್ಷ ಎಚ್. ಪಿ. ಸಂಪತ್ ಕುಮಾರ್, ಪಂಚಾಯಿತಿ ಉಪಾಧ್ಯಕ್ಷರಾದ ಜಿ. ಆರ್. ರಾಧಾಮಣಿ ಹರೀಶ್, ಸದಸ್ಯರಾದ ವಿಠ್ಠಲ್ ಕುಮಾರ್, ಶಿವಕುಮಾರ್, ವಿಜಯಲಕ್ಷ್ಮಿ ಜಗದೀಶ್, ಗೌಡಕಿ ಮಂಜುನಾಥ್, ಶಬಿನ್ ತಾಜ್ ಮಹಮ್ಮದ್ ಜಾವೇದ್, ಜಬಿನ್ ತಾಜ್, ಯಲ್ಲಪ್ಪ , ಪಿಡಿಒ ಶಿವರಾಮ್, ಸಾವಯವ ಕೃಷಿಕ ರಮೇಶ್, ಮುಖಂಡರಾದ ಫೈನಾನ್ಸ್ ಪ್ರಕಾಶ್, ಎಚ್.ಬಿ.ರಂಗಸ್ವಾಮಿ, ಮುರಳಿ, ಹೋಟೆಲ್ ಗುರು, ಬಸವನಪುರ ಪ್ರಕಾಶ್, ಪಟೇಲ್ ಕುಮಾರ್, ಕುಳ್ಳೇಗೌಡ, ಎಲ್‌ಐಸಿ ಕುಮಾರ್, ಸಮುದ್ರಳ್ಳಿ ಗಣೇಶ್, ಶೇಖರ್ ಹೊನ್ನಮಾರನಹಳ್ಳಿ, ರವಿ ಆರ್ಟ್ಸ್, ರೇಣುಕ ಸ್ವಾಮಿ, ಸುಹೀಲ್ ಜಾವೇದ್, ಅಕ್ಕನಹಳ್ಳಿ ಹಿಟಾಚಿ ಗಿರೀಶ್ ಇತರರಿದ್ದರು.