ನ್ಯೂಸ್

ನಡುರಸ್ತೆಯಲ್ಲಿ ಬೆತ್ತಲೆ ತಿರುಗಾಡಿದ ಜೋಡಿ! ಇಬ್ಬರ ಜಗಳ ಸ್ಥಳೀಯರಿಗೆ ಮುಜುಗರ

ನಾಗ್​ಪುರ: ಭಾನುವಾರ (ಜು.28) ತಡರಾತ್ರಿ ಕಾರಿನಲ್ಲಿ ಬಂದ ಯುವಕ-ಯುವತಿ ಬೆತ್ತಲೆಯಾಗಿ ನಡುರಸ್ತೆಯಲ್ಲಿ ಓಡಾಡಿರುವ ಘಟನೆ ನಾಗ್​ಪುರದ ಲಕ್ಷ್ಮಿನಗರದ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಘಟನೆಯ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ತಡರಾತ್ರಿ 2 ಗಂಟೆ ಸುಮಾರಿಗೆ ಲಕ್ಷ್ಮಿನಗರದ ಮುಖ್ಯರಸ್ತೆಯಲ್ಲಿ ಜೋಡಿಗಳು ಬೆತ್ತಲೆಯಾಗಿ ಓಡಾಡಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್​ ಸವಾರರು ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವರದಿಗಳ ಪ್ರಕಾರ, ಈ ಇಬ್ಬರು ಯಾವುದೋ ವಿಷಯಕ್ಕೆ ವಾಗ್ವಾದಕ್ಕಿಳಿದಿದ್ದರು ಎನ್ನಲಾಗಿದೆ.

ಇಬ್ಬರು ಈ ರೀತಿ ಬೆತ್ತಲೆ ಓಡಾಡಲು ಕಾರಣವೇನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದ್ರೆ, ವ್ಯಾಪಕವಾಗಿ ಹರಿದಾಡಿದ ವಿಡಿಯೋ ಬೆನ್ನಲ್ಲೇ ಬಜಾಜ್​ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಯಾವುದೇ ದೂರು ದಾಖಲಿಸದೆ ಯುವಕ-ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಠಾಣೆಗೆ ಆಗಮಿಸಿದ್ದು, ಅವರಿಬ್ಬರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದುಹೋಗಿದೆ ಕ್ಷಮಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.