ನ್ಯೂಸ್

ಎನ್​​ಟಿಎ: ವಿವಿಧ ಪರೀಕ್ಷೆಗಳ ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕ ವಿಸ್ತರಣೆ

sspmiracle1982

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿವಿಧ ಪರೀಕ್ಷೆಗಳ ಅರ್ಜಿ ತಿದ್ದುಪಡಿಗೆ ನಿಗದಿಪಡಿಸಿದ ಕೊನೆಯ ದಿನಾಂಕನ್ನು ಮುಂದೂಡಿದೆ.

ಜೆಇಇ, ನೀಟ್, ಯುಜಿಸಿ ನೆಟ್, ಇಗ್ನೋ ಓಪನ್‌ಮ್ಯಾಟ್, ಪಿಎಚ್‌ಡಿ, ಜೆಎನ್‌ಯುಇಇ, ಐಸಿಎಆರ್ ನೆಟ್, ಸಿಎಸ್‌ಐಆರ್- ಯುಜಿಸಿ ನೆಟ್ ಮತ್ತು ಎಐಎಪಿಜಿಇಟಿ ಪರೀಕ್ಷೆಗಳ ಅರ್ಜಿ ನಮೂನೆಗಳಲ್ಲಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕನ್ನು ಜುಲೈ 20ರ ವರೆಗೆ ವಿಸ್ತರಿಸಿದೆ.

ಇದಕ್ಕೂ ಮೊದಲು ಜುಲೈ 15 ರವರೆಗೆ ಗಡುವು ನಿಗದಿಪಡಿಸಲಾಗಿತ್ತು.  ಅರ್ಜಿದಾರರು ಪರೀಕ್ಷಾ ಕೇಂದ್ರದ ನಗರಗಳ ಆಯ್ಕೆ, ಫೋಟೋ ಮತ್ತು ಸಹಿ ಇತ್ಯಾದಿ ವಿವರಗಳಲ್ಲಿ ಅರ್ಜಿ ನಮೂನೆಯಲ್ಲಿ ತಿದ್ದುಪಡಿ ಮಾಡಬಹುದು.

ಎನ್​ಟಿಎ ಜೆಇಇ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಸಿದರೆ, ನೀಟ್ ಯುಜಿ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 8287471852, 8178359845, 9650173668, 9599676953 ಮತ್ತು 8882356803 ಗೆ ಸಂಪರ್ಕಿಸಬಹುದು. ಅಥವಾ nta.ac.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.