????????????????????????????????????????????????????????????????????????????????????????????????????????????????????????????????? 
ನ್ಯೂಸ್

ಸೇವಾ ಮನೋಭಾವ ಕಲಿಸಲಿರುವ ಎನ್‌ಎಸ್‌ಎಸ್

Mysuru Rural

ಹುಣಸೂರು: ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣದ ಜತೆಗೆ ಸೇವಾ ಮನೋಭಾವವನ್ನೂ ಕಲಿಸುತ್ತದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಶನಿವಾರ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ವತಿಯಿಂದ ಮೈಸೂರು- ಚಾಮರಾಜನಗರ ಜಿಲ್ಲಾಮಟ್ಟದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇವಾ ಮನೋಭಾವ ಎನ್ನುವುದು ಕೇವಲ ಫ್ಯಾಷನ್ ಆಗಿರುವ ಈ ದಿನಗಳಲ್ಲಿ, ಇಂತಹ ಶಿಬಿರಗಳು ಅಗತ್ಯವಿದೆ ಎಂದರು.

ಸಮಾರಂಭಗಳಲ್ಲಿ ಸನ್ಮಾನ ಮಾಡುವ ಬದಲಾಗಿ ಗಿಡ ನೆಡುವ ಮೂಲಕ ಉತ್ತಮ ಪರಿಸರ ಕಾಪಾಡಿ ಎಂದು ಮನವಿ ಮಾಡಿದರು.

ಹಿರಿಯಪತ್ರಕರ್ತ ಅಂಶಿಪ್ರಸನ್ನಕುಮಾರ್ ಮಾತನಾಡಿ, ದೇಶದ ಐಕತೆ ಮತ್ತು ಸಮಾನತೆಗಾಗಿ ಪ್ರತಿಯೊಬ್ಬರೂ ಪಣ ತೋಡಬೇಕಿದೆ ಎಂದು ಹೇಳಿದರು.

ಮೈಸೂರು ವಿವಿಯ ಎನ್‌ಎಸ್‌ಎಸ್ ಸಂಯೋಜಕ ಚಂದ್ರಶೇಖರ್, ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶಯ್ಯ ಮಾತನಾಡಿದರು. ಮೈಸೂರು ವಿವಿಯ ಎನ್‌ಎಸ್‌ಎಸ್ ಆಧಿಕಾರಿ ಡಾ.ಭಾಸ್ಕರ್ ಅವರನ್ನು ಅಭಿನಂದಿಸಲಾಯಿತು.

ತಾ.ಪಂ.ಉಪಾಧ್ಯಕ್ಷ ಎಸ್.ಪ್ರೇಮೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಪ್ರಭು, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ, ಮುಖಂಡರಾದ ಹರಿಹರ ಆನಂದಸ್ವಾಮಿ, ಅಜ್ಗಾರಪಾಷಾ, ಕಾಲೇಜು ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ತಾ.ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಶಿಬಿರಾಧಿಕಾರಿಗಳಾದ ಡಾ.ಕಿರಣ್ ಕುಮಾರ್. ಡಾ.ಕವಿತಾ, ಡಾ.ಸಿದ್ದಪ್ಪ, ಡಾ.ಭಾಸ್ಕರ್, ಮಹೇಶ್, ಪ್ರಿಯಾಂಕ ಹಾಜರಿದ್ದರು.