ನ್ಯೂಸ್

ನರೇಗಾ ನೌಕರರಿಗೆ ವೇತನ ಬಿಡುಗಡೆ ಮಾಡಲು ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ನರೇಗಾ ನೌಕರರ 6 ತಿಂಗಳ ವೇತನ ಕೂಡಲೇ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಲ್ಲಿಯ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ನಗರದ ತಾಪಂ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನರೇಗಾ ನೌಕರರಿಗೆ ಕಳೆದ ಆರು ತಿಂಗಳಿಂದ ವೇತನ ಪಾವತಿ ಮಾಡದೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬಗಳು ಆಥಿರ್ಕವಾಗಿ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ನಮಗೆ ವೇತನ ಪಾವತಿ ಮಾಡಬೇಕು. ಜತೆಗೆ ಸೇವಾ ಭದ್ರತೆ ಹಾಗೂ ಎಲ್ಲ ನರೇಗಾ ನೌಕರರಿಗೆ ಆರೋಗ್ಯ ವಿಮೆ ಅನುಷ್ಠಾನಗೊಳಿಸಬೇಕು.

ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ನರೇಗಾ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ತಾಪಂ ಇಒ ಪರಮೇಶ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಮುಖರಾದ ಎಂ.ಐ.ಎಸ್​. ಸುನೀತಾ ಸಿಮೇಕೇರಿ, ಕಿರಣಕುಮಾರ, ರವಿಕುಮಾರ ಯಾಳಗಿ, ಸಂತೋಷಕುಮಾರ ಲಮಾಣಿ, ರೇಷ್ಮಾ ಲಮಾಣಿ, ಗುರುರಾಜ, ಹನುಮಂತ ಗೌಡ್ರ, ಹನುಮಂತ ಬನ್ನಿಮಟ್ಟಿ, ಮಂಜುನಾಥ ಚಲವಾದಿ, ಪುಟ್ಟಪ್ಪ ಒಡೆಯರ, ಕಾಂತೇಶ ಐರಣಿ ಮತ್ತಿತರರು ಪಾಲ್ಗೊಂಡಿದ್ದರು.