ರಾಣೆಬೆನ್ನೂರ: ನರೇಗಾದಡಿ ದನದ ಕೊಟ್ಟಿಗೆ ನಿಮಿರ್ಸಿಕೊಂಡ ಅನುದಾನ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಲಾನುಭವಿ ಹಾಗೂ ರೈತರು ಆಕಳು ಸಮೇತ ಬಂದು ತಾಲೂಕಿನ ಕವಲೆತ್ತು ಗ್ರಾಪಂ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಲಾನುಭವಿ ಚಂದ್ರಪ್ಪ ಹೊಳೆಸಿರಿಗೇರಿ ಮಾತನಾಡಿ, ನನ್ನ ತಾಯಿ ಫಕ್ಕೀರಮ್ಮ ಅವರ ಹೆಸರಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲಿ ದನದ ಕೊಟ್ಟಿಗೆ ನಿಮಿರ್ಸಿಕೊಳ್ಳಲು ಪಿಡಿಒ ತಿಳಿಸಿದ್ದರು. ಅದರಂತೆ 2021&22ನೇ ಸಾಲಿನಲ್ಲಿ ಸ್ವಂತ ಹಣದಲ್ಲಿ ಖರ್ಚು ಮಾಡಿ ದನದ ಕೊಟ್ಟಿಗೆ ನಿಮಿರ್ಸಿಕೊಂಡಿದ್ದೇನೆ.
ಆದರೆ, ಅಧಿಕಾರಿಗಳು ತಾಂತ್ರಿಕ ದೋಷದ ನೆಪಹೇಳಿ ಈವರೆಗೂ ಕಾಮಗಾರಿ ಹಣ ಬಿಡುಗಡೆ ಮಾಡುತ್ತಿಲ್ಲ. ನಿತ್ಯವೂ ಗ್ರಾಪಂಗೆ ಅಲೆದಾಡಿ ಸುಸ್ತಾಗಿ ಹೋಗಿದೆ. ಆದ್ದರಿಂದ ಕಾಮಗಾರಿ ಹಣ ಬಿಡುಗಡೆ ಮಾಡುವವರೆಗೂ ಆಕಳು ಸಮೇತ ಇಲ್ಲಿಯೆ ಕುಳಿತುಕೊಳ್ಳುವೆ ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಬಂದ ತಾಪಂ ಇಒ ಪರಮೇಶ ಮತ್ತು ಕುಮಾರಪಟ್ಟಣ ಠಾಣೆ ಪಿಎಸ್ಐ ಪ್ರವಿಣಕುಮಾರ, ಶೀಘ್ರದಲ್ಲಿಯೆ ದನದ ಕೊಟ್ಟಿಗೆಯ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ರೈತರಾದ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಮೇರಾಜ, ರಾಜಪ್ಪ ಆರುಂಡಿ, ಅಷ್ಣುಮೂತಿರ್, ಹನುಮಂತಪ್ಪ ಮತ್ತಿತರರು ಇದ್ದರು.