ನ್ಯೂಸ್

6ರಿಂದ 8ನೇ ತರಗತಿಯ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಪ್ರಕಟ

ಬೆಂಗಳೂರು: ಆರರಿಂದ ಎಂಟನೇ ತರಗತಿಯ 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ. ನೇಮಕಾತಿಯ ಸಂಪೂರ್ಣ ವಿವರ ಅಧಿಸೂಚನೆಯಲ್ಲಿದೆ.

ಏ.23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸಾಮಾನ್ಯ ವರ್ಗದವರು ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದರೆ, 1250 ರೂಪಾಯಿ ಪಾವತಿಸಬೇಕು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 625 ರೂಪಾಯಿ ಪಾವತಿಸಬೇಕು. ಅರ್ಜಿ ಸಲ್ಲಿಕೆಗೆ ಏ.22 ಕೊನೆಯ ದಿನವಾಗಿದೆ.

ಮೆರಿಟ್ ಪಟ್ಟಿ ಸಿದ್ಧಪಡಿಸುವಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇ.0.50, ಟಿಇಟಿ ಶೇ.0.20, ಪದವಿ ಅಂಕ ಶೇ.0.20 ಶಿಕ್ಷಕರ ಶಿಕ್ಷಣದಲ್ಲಿ ಕೋರ್ಸ್‌ನಲ್ಲಿ ಪಡೆದ ಅಂಕ ಶೇ.0.10 ಅಂಕಗಳನ್ನು ಪರಿಗಣಿಸಲಿದೆ. ಹೆಚ್ಚಿನ ಮಾಹಿತಿಗೆ https://www.schooleducation.kar.nic.in/ ನೋಡಬಹುದು.